ಅತ್ಯಾಚಾರಕ್ಕೆ ಯತ್ನಿಸಿದವನ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆ!
ಸಿಧಿ(ಮಧ್ಯಪ್ರದೇಶ): ತನ್ನ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದ ಪುರುಷನ ಜನನಾಂಗವನ್ನೇ ಮಹಿಳೆಯೊಬ್ಬಳು ಕತ್ತರಿಸಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ. 45 ವರ್ಷದ ಮಹಿಳೆ ಅತ್ಯಾಚಾರಕ್ಕೆ ಯತ್ನಿಸಿದವನ ಜನನಾಂಗವನ್ನು ಕತ್ತರಿಸಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಉಮರಿಹಾ ಗ್ರಾಮದಲ್ಲಿ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಮಹಿಳೆ ನೀಡಿದ ದೂರಿನ ಪ್ರಕಾರ, ಘಟನೆ ನಡೆದಾಗ ಪತಿ ಕೆಲಸದ ಮೇಲೆ ಹೊರಗೆ ತೆರಳಿದ್ದರು.ಆರೋಪಿ ಮನೆಗೆ ನುಗ್ಗಿದಾಗ ಮಹಿಳೆ ತನ್ನ 13 ವರ್ಷದ ಮಗನೊಂದಿಗೆ ಮನೆಯಲ್ಲಿದ್ದಳು. ಆದಾಗ್ಯೂ ಕಳ್ಳ ಮನೆಗೆ ನುಗ್ಗಿದ್ದಾನೆಂದು ಭಾವಿಸಿದ ಬಾಲಕ ತನ್ನ ಜೀವ ಉಳಿಸಿಕೊಳ್ಲಲು ಮನೆಯಿಂದ ಹೊರಗೆ ಓಡಿದ್ದಾನೆ. ಇದಾದ ನಂತರ ಆರೋಪಿ ಮಹಿಳೆಯನ್ನು ಥಳಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ. ಮಹಿಳೆ ಸರಿಸುಮಾರು 20 ನಿಮಿಷಗಳ ಕಾಲ ಅವನ ಪ್ರಯತ್ನವನ್ನು ತಡೆದಿದ್ದಾಳೆ.
"ತನ್ನನ್ನು ರಕ್ಷಿಸಿಕೊಳ್ಲುವ ಯತ್ನದಲ್ಲಿ ಮಹಿಳೆ ತನ್ನ ಹಾಸಿಗೆಯ ಕೆಳಗೆ ಇಟ್ಟಿದ್ದ ಕುಡಗೋಲು ಎತ್ತಿಕೊಂಡು ಪುರುಷನ ಜನನಾಂಗಗಳನ್ನು ಕತ್ತರಿಸಿದಳು. ನಂತರ ಮಹಿಳೆ ಪೊಲೀಸ್ ಔಟ್ ಪೋಸ್ಟ್ ತಲುಪಿ ಶುಕ್ರವಾರ ಮುಂಜಾನೆ 1.30 ರ ಸುಮಾರಿಗೆ ಆತನ ವಿರುದ್ಧ ದೂರು ದಾಖಲಿಸಿದ್ದಾಳೆ. ಖಡ್ಡಿ ಪೊಲೀಸ್ ಔಟ್ ಪೋಸ್ಟ್ ಇನ್-ಚಾರ್ಜ್ ಸಬ್ ಇನ್ಸ್ಪೆಕ್ಟರ್ (ಎಸ್ಐ) ಧರ್ಮೇಂದ್ರ ಸಿಂಗ್ ರಜಪೂತ್ ತಿಳಿಸಿದ್ದಾರೆ.
0 التعليقات: