Monday, 1 March 2021

ಸೌದಿ ಅರೇಬಿಯಾ | ಭೀಕರ ಅಪಘಾತಕ್ಕೆ ಕೇರಳದ ಇಬ್ಬರು ನರ್ಸ್ ಗಳು ಬಲಿ


ಸೌದಿ ಅರೇಬಿಯಾ | ಭೀಕರ ಅಪಘಾತಕ್ಕೆ ಕೇರಳದ ಇಬ್ಬರು ನರ್ಸ್ ಗಳು ಬಲಿ

ಸೌದಿ ಅರೇಬಿಯಾ: ಭೀಕರ ಅಪಘಾತ ಸಂಭವಿಸಿ ಕೇರಳ ಮೂಲದ ಇಬ್ಬರು ನರ್ಸ್​ಗಳು ಸಾವನ್ನಪ್ಪಿದ ದಾರುಣ ಘಟನೆ ಸೌದಿ ಅರೇಬಿಯಾದ ತಾಯಿಫ್​ನಲ್ಲಿ ನಡೆದಿದೆ. ಕೇರಳದ ವೈಕೊಮ್​ ವಂಚಿಯೂರ್​ ನಿವಾಸಿ ಅಖಿಲಾ (29) ಮತ್ತು ಕೊಲ್ಲಂ ನಿವಾಸಿ ಸುಬಿ (33) ಮೃತ ನರ್ಸ್ ಗಳು.

ಸಹೋದ್ಯೋಗಿಗಳಾದ ಆಯನ್ಸಿ ಮತ್ತು ಪ್ರಿಯಾಂಕಾ ಗಂಭೀರವಾಗಿ ಗಾಯಗೊಂಡಿದ್ದು, ಇದೀಗ ತಾಯಿಫ್​ನ ಕಿಂಗ್​ ಫೈಸಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಿನಿಬಸ್​ನಲ್ಲಿ ರಿಯಾದ್​ನಿಂದ ಜೆದ್ದಾಗೆ ಕ್ವಾರಂಟೈನ್​ ಪೂರ್ಣಗೊಳಿಸಿ ಪ್ರಯಾಣಿಸುತ್ತಿದ್ದಾಗ ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.SHARE THIS

Author:

0 التعليقات: