Friday, 19 March 2021

ಆಧ್ಯಾತ್ಮಿಕಾಂತರಿಕ್ಷದಲ್ಲಿ ತ್ವಾಹಿರ್ ತಂಙಳ್ ಉರೂಸ್ ಮುಬಾರಕಿಗೆ ಸಂಭ್ರಮದ ಆರಂಭ

 

ಆಧ್ಯಾತ್ಮಿಕಾಂತರಿಕ್ಷದಲ್ಲಿ 
ತ್ವಾಹಿರ್ ತಂಙಳ್ ಉರೂಸ್ ಮುಬಾರಕಿಗೆ ಸಂಭ್ರಮದ ಆರಂಭ

ಕಾಸರಗೋಡು: ಮುಹಿಮ್ಮಾತ್ ಸಂಸ್ಥೆಗಳ ಶಿಲ್ಪಿ ಮತ್ತು ಪ್ರಮುಖ ಆಧ್ಯಾತ್ಮಿಕ ವಿದ್ವಾಂಸರಾಗಿದ್ದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ 15 ನೇ ಉರೂಸ್ ಮುಬಾರಕಿನ ಪ್ರಯುಕ್ತ ಧ್ವಜಾರೋಹಣ ನಡೆಯಿತು.

ಎಟ್ಟಿಕ್ಕುಳಂ ತಾಜುಲ್ ಉಲಮಾ ಮಖಾಂ, ಸಅದಿಯಾ ನೂರುಲ್ ಉಲಮಾ ಮಖಾಂ, ಇಚ್ಚಿಲಂಗೋಡ್ ಮಾಲಿಕ್ ದೀನಾರ್ ಮಖಾಂ, ಕಾಂಞಂಗಾಡ್ ಆಲಂಪಾಡಿ ಉಸ್ತಾದ್ ಮಖಾಂ, ಮುಹಿಮ್ಮಾತ್ ಅಹ್ದಲ್ ತಂಙಳ್ ಮಖಾಂ ಝಿಯಾರತಿನ ನಂತರ ನಡೆದ ಕಾರ್ಯಕ್ರಮದಲ್ಲಿ ಮುಹಿಮ್ಮಾತ್ ಉಪಾಧ್ಯಕ್ಷರಾದ ಸಿ.ಎನ್ ಅಬ್ದುಲ್ ಖಾದಿರ್ ಮಾಸ್ಟರ್ ಧ್ವಜಾರೋಹಣ ನಡೆಸಿದರು. ಮಖಾಂ ಝಿಯಾರತುಗಳಿಗೆ ಸಯ್ಯಿದ್ ಇಸ್ಮಾಯಿಲ್ ಬಾಫಕಿ ತಂಙಳ್ ಕೊಯ್ಲಾಂಡಿ, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಸಯ್ಯಿದ್ ಅಹ್ಮದ್ ಜಮಾಲುದ್ದೀನ್ ತಂಙಳ್ ಕರೆ ಮುಂತಾದವರು ನೇತೃತ್ವ ನೀಡಿದರು.

ಖತ್ಮುಲ್ ಕುರ್ಆನ್ ಕಾರ್ಯಕ್ರಮಕ್ಕೆ ಸಯ್ಯಿದ್ ಮುಟ್ಟಂ ಕುಂಞಿಕೋಯ ತಂಙಳ್ , ಸಯ್ಯಿದ್ ಮದನಿ ತಂಙಳ್ ಮೊಗ್ರಾಲ್ ನೇತೃತ್ವ ವಹಿಸಿದರು.ಸೆಯ್ಯಿದ್ ಅತಾವುಲ್ಲ ತಂಙಳ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದ ಕಾರ್ಯಕ್ರಮದಲ್ಲಿ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಅಧ್ಯಕ್ಷತೆ ವಹಿಸಿದರು. ಅಬೂಬಕರ್ ಕಾಮಿಲ್ ಸಖಾಫಿ ಉಸ್ತಾದರು ಸ್ವಾಗತಿಸಿದರು. ಸಯ್ಯಿದ್ ಅಬ್ದುರ್ರಹ್ಮಾನ್  ಇಂಬಿಚ್ಚಿಕೋಯ ತಂಙಳ್ ಬಾಯಾರ್ ಉದ್ಘಾಟನೆ ಮಾಡಿದರು. ಸಯ್ಯಿದ್ ಅಲವಿ ತಂಙಳ್ ಚಟ್ಟುಂಕುಝಿ , ಕಾಟಿಪ್ಪಾರ ಅಬ್ದುಲ್ ಖಾದರ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಿದರು. ಸಯ್ಯಿದ್ ಅಲವಿ ತಂಙಳ್ ಚಟ್ಟುಂಕುಝಿ, ಬಿ.ಎಸ್ ಅಬ್ದುಲ್ಲಕುಂಞಿ ಫೈಝಿ, ಸುಲೈಮಾನ್ ಕರಿವಲ್ಲೂರ್, ಅಬ್ದುರ್ರಹ್ಮಾನ್ ಅಹ್ಸನಿ, ಇತ್ತಿಹಾದ್ ಮುಹಮ್ಮದ್ ಹಾಜಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮೂಸ ಸಖಾಫಿ ಕಳತ್ತೂರು, ಎಂ‌ ಅಂದುಂಞಿ ಮೊಗರ್, ಉಮರ್ ಸಖಾಫಿ ಕೊಂಬೋಡ್ ಮುಂತಾದವರು ಭಾಷಣ ಮಾಡಿದರು. 


SHARE THIS

Author:

0 التعليقات: