Wednesday, 10 March 2021

ಜೆಡಿಎಸ್‌ ಬಾಗಿಲು ತೆರೆದಿದೆ, ಹೋಗೋರು ಹೋಗಬಹುದು, ಬರೋರು ಬರಬಹುದು: ಮಾಜಿ ಸಿಎಂ ಹೆಚ್.ಡಿ.ಕೆ


 ಜೆಡಿಎಸ್‌ ಬಾಗಿಲು ತೆರೆದಿದೆ, ಹೋಗೋರು ಹೋಗಬಹುದು, ಬರೋರು ಬರಬಹುದು: ಮಾಜಿ ಸಿಎಂ ಹೆಚ್.ಡಿ.ಕೆ

ಮೈಸೂರು : ಪಕ್ಷ ಬಿಡುವವರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಜೆಡಿಎಸ್‌ ಬಾಗಿಲು ತೆರೆದಿದೆ, ಹೋಗೋರು ಹೋಗಬಹುದು, ಬರೋರು ಬರಬಹುದು ಎಂಬುದಾಗಿ ಮಧು ಬಂಗಾರಪ್ಪ ಪಕ್ಷ ತೊರೆಯುತ್ತಿರುವ ಕುರಿತಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನಲ್ಲಿ ಶಿವರಾತ್ರಿ ಪ್ರಯುಕ್ತ ಚಾಮುಂಡೇಶ್ವರಿ, ನಂಜುಂಡೇಶ್ವರ ದರ್ಶನ ಪಡೆದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಬಳಿಕ ನಾಡಿನ ಜನತೆಗೆ ಶಿವರಾತ್ರಿ ಶುಭಾಷಯ ಹೇಳಿದ ಅವರು, ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಮಧು ಬಂಗಾರಪ್ಪ ಪಕ್ಷ ತೊರೆಯುತ್ತಿರುವ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದಂತ ಅವರು, ಪಕ್ಷ ಬಿಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹಳಬರು ಹೋದರೆ ಹೊಸಬರು ಬರ್ತಾರೆ. ಮಧು ಬಂಗಾರಪ್ಪ ಪಕ್ಷ ತೊರೆಯುವುದು ಹಳೆಯ ವಿಚಾರ‌ವಾಗಿದೆ. ಅಧಿಕಾರ ಉಂಡು ಬೆನ್ನಿಗೆ ಚೂರಿ ಹಾಕುವುದು ಹೊಸದೇನಲ್ಲ. ಯಾರು ಹೋಗಲಿ ಬಿಡಲಿ ಪಕ್ಷಕ್ಕೇನು ನಷ್ಟವಿಲ್ಲ. ಅವರಿಗೆ ಲಾಭ ಆಗುತ್ತೆ ಎಂದು ಶಿಸ್ತು ಕ್ರಮ ಕೈಗೊಂಡಿಲ್ಲ. ದೇವೆಗೌಡರ ಕುಟುಂಬಕ್ಕೆ ಇದೇನು ಹೊಸದೇನಲ್ಲ. ದೇವೆಗೌಡರು ಯಾರನ್ನು ಬೆಳೆಸಿದ್ದಾರೋ ಅವರೇ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂಬುದಾಗಿ ಕಿಡಿ ಕಾರಿದರು.


SHARE THIS

Author:

0 التعليقات: