ಸುಣ್ಣಮೂಲೆ: ಬಿಳಿರಕ್ತಕಣ ಹೀನತೆಯಿಂದ ಬಾಲಕ ಮೃತ್ಯು
ಕನಕಮಜಲು ಗ್ರಾಮದ ಸುಣ್ಣಮೂಲೆಯ ಎಂ.ಎಸ್. ಅಬೂಬಕ್ಕರ್ ಹಾಜಿಯವರ ಮೊಮ್ಮಗ ಸುಣ್ಣಮೂಲೆಯ ಹುಸೈನ್ ರವರ ಪುತ್ರ ರಝೀನ್ ಮೋನ್ ಕಳೆದ ಕೆಲವು ದಿನಗಳಿಂದ ಬಿಳಿರಕ್ತ ಕಣದ ಹೀನತೆಯಿಂದಾಗಿ ಕೇರಳದ ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಾ.6 ರಂದು ಬೆಳಿಗ್ಗೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಬಾಲಕನಿಗೆ 18 ವರ್ಷ ವಯಸ್ಸಾಗಿದ್ದು, ತಾಯಿ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.
ತಿರುವನಂತಪುರಂನಿಂದ ಮೃತದೇಹವನ್ನು ಸುಣ್ಣಮೂಲೆಯ ಅವರ ನಿವಾಸಕ್ಕೆ ತಂದ ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.
ಮೃತ ಬಾಲಕ ಕಳೆದ 1 ವಾರದ ಹಿಂದೆ ಉದ್ಯೋಗಕ್ಕೆಂದು ಕೇರಳದ ತಿರುವನಂತಪುರಕ್ಕೆ ತೆರಳಿದ್ದರು. ಅಲ್ಲಿ ಅಸೌಖ್ಯಕ್ಕೊಳಗಾದ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಹಿಂದೆಯೂ ಇದೇ ಸಮಸ್ಯೆ ಉಲ್ಬಣಗೊಂಡ ಹಿನ್ನಲೆಯಲ್ಲಿ ರಝೀನ್ ಮೋನ್ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
0 التعليقات: