Saturday, 13 March 2021

ಜಾರಕಿಹೊಳಿ ಸೆಕ್ಸ್ ಹಗರಣ; ‘ಸಿಡಿ ಲೇಡಿ’ ದಿಢೀರ್ ಪ್ರತ್ಯಕ್ಷ


ಜಾರಕಿಹೊಳಿ ಸೆಕ್ಸ್ ಹಗರಣ; ‘ಸಿಡಿ ಲೇಡಿ’ ದಿಢೀರ್ ಪ್ರತ್ಯಕ್ಷ 

ರಾಜ್ಯ ರಾಜಕೀಯದಲ್ಲಿ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಕುರಿತಂತೆ ಸಂತ್ರಸ್ತ ಯುವತಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರೆ. ಯುವತಿ ಈಗ ಹೇಳಿಕೆ ನೀಡಿದ್ದು, ‘ಪ್ರಕರಣದಲ್ಲಿ ನನ್ನ ಬಲಿಪಶು ಮಾಡಲಾಗಿದ್ದು, ಗೃಹ ಸಚಿವರು ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿಕೊಂಡಿದ್ದಾಳೆ.

ಅಜ್ಞಾತ ಸ್ಥಳದಿಂದ 34 ಸೆಕೆಂಡಿನ ವಿಡಿಯೋ ಮಾಡಿ ಹೊರಬಿಟ್ಟಿರುವ ಸಂತ್ರಸ್ತೆ, ‘ರಮೇಶ್ ಜಾರಕಿಹೊಳಿ ಅವರು ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ನನ್ನ ಮಾನ ಹರಾಜಾಗಿದೆ. ನನ್ನ ಮನೆ ಹತ್ತಿರ ಬಂದು ಹಲವರು ಏನೆಲ್ಲಾ ಹೇಳಿದ್ದಾರೆ. ನನ್ನ ತಂದೆ, ತಾಯಿ ಹಾಗೂ ನಾನು ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇವೆ. ದಯವಿಟ್ಟು ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು’ ಎಂದು ಯುವತಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ಇಂದಷ್ಟೇ ರಮೇಶ್ ಜಾರಕಿಹೊಳಿ ಅವರು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸಿಡಿ ಕೇಸ್ ಕುರಿತಂತೆ ದೂರು ನೀಡಿದ್ದರು. ಆದರೆ ಯುವತಿ ಸಾರ್ವಜನಿಕವಾಗಿ ಈ ರೀತಿಯಲ್ಲಿ ಹೇಳಿಕೆ ನೀಡಿರುವುದು ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಗೆ ಸ್ಪೋಟಕ ತಿರುವು ಪಡೆದಿದೆ.SHARE THIS

Author:

0 التعليقات: