Saturday, 20 March 2021

ಎಸ್.ಎಸ್.ಎಫ್ ದೇಶೀಯ ಕೌನ್ಸಿಲ್ ಗೆ ಸಡಗರದ ಆರಂಭ


ಎಸ್.ಎಸ್.ಎಫ್  ದೇಶೀಯ ಕೌನ್ಸಿಲ್ ಗೆ ಸಡಗರದ ಆರಂಭ 

ಅಜ್ಮೀರ್: ಎಸ್.ಎಸ್.ಎಫ್ ನ ಸದಸ್ಯತ್ವ ಕಾಲ ಕಾರ್ಯಗಳಿಗೆ ಮುಕ್ತಾಯಗೊಂಡು ನಡೆಯಲಿರುವ ದೇಶೀಯ  ಕೌನ್ಸಿಲಿಗೆ ಸುಲ್ತಾನುಲ್ ಹಿಂದ್ ನ ಮಣ್ಣಿನಲ್ಲಿ ಸಡಗರದ  ಪ್ರಾರಂಭ. ಎರಡು ದಿನಗಳಲ್ಲಿ ನಡೆಯುವ ಕೌನ್ಸಿಲ್ ಇಂದು ಸಂಜೆ ಮಕ್ತಾಯಗೊಳ್ಳಲಿದೆ.

ಮೂರು ತಿಂಗಳಿನಿಂದ  ದೇಶೀಯ ಆಧಾರದಲ್ಲಿ ನಡೆಯುತ್ತಿರುವ ಸದಸ್ಯತ್ವ ಅಭಿಯಾನ ಪುನರ್ ಪ್ರಕ್ರಿಯೆಯ ಮುಕ್ತಾಯ ಸಮಾರಂಭವಾಗಿದೆ ದೇಶೀಯ ಕೌನ್ಸಿಲ್ ನಲ್ಲಿ ನಡೆಯುವುದು. ಇಪ್ಪತ್ತೈದು ರಾಜ್ಯಗಳಲ್ಲಿ ಸದಸ್ಯತ್ವ, ಪುನರ್ ಪ್ರಕ್ರಿಯೆ ಕಾರ್ಯಕ್ರಮಗಳು ಸರಿಯಾಗಿ  ಪೂರ್ತಿಮಾಡಿದ ಬಳಿಕ  ನಡೆಯುವ ದೇಶೀಯ  ಕೌನ್ಸಿಲ್ ನಲ್ಲಿ ನವ ಸಾರಥಿಗಳನ್ನು ಆಯ್ಕೆ ಮಾಡುವರು.

ಶನಿವಾರ ಸಂಜೆ 6 ಗಂಟೆಗೆ ನಡೆದ ಅಜ್ಮೀರ್ ಝಿಯಾರತ್ ನೊಂದಿಗೆ ದೇಶೀಯ ಕೌನ್ಸಿಲ್ ಅಧಿಕೃತವಾಗಿ ಪ್ರಾರಂಭವಾಯಿತು. ಹಝ್ರತ್ ನೂರ್ ಐನ್ ಚಿಸ್ತಿ ಅಜ್ಮೀರ್  ಝಿಯಾರತಿಗೆ ನೇತೃತ್ವ ವಹಿಸಿದರು. ಎಸ್ಸೆಸ್ಸೆಫ್ ದೇಶೀಯ ಪ್ರೆಸಿಡೆಂಟ್ ಶೌಖತ್ ನಈಮಿ ಅಲ್ ಬುಖಾರಿ ಧ್ವಜಾರೋಹಣ ನಡೆಸಿದರು. ದೇಶೀಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ  ಹಝ್ರತ್ ಮಹದಿ ಮಿಯಾನ್ ಚಿಶ್ತಿ ಕೌನ್ಸಿಲ್ ಉದ್ಘಾಟಿಸಿದರು.

ಪ್ರಧಾನ ಕಾರ್ಯದರ್ಶಿ ಡಾ.ಫಾರೂಖ್ ನಈಮಿ ಅಲ್ ಬುಖಾರಿ ಸಂಘಟನಾ ವರದಿಯನ್ನು, ಶರೀಫ್ ಬೆಂಗಳೂರು ಕಾರ್ಯಕಾರಿ ವರದಿಯನ್ನೂ, ಝುಹೈರುದ್ದೀನ್ ನೂರಾನಿ ವಿತ್ತ ವರದಿಯನ್ನೂ ಮಂಡಿಸಿದರು. ವಿವಿಧ ವಿಷಯಗಳಲ್ಲಿ ನಡೆದ ಚರ್ಚೆಗಳಿಗೆ ಡಾ. ಖಾಲಿದ್ ಸೈಫುಲ್ಲಾ ದೆಹಲಿ, ಸುಫ್ಯಾನ್ ಸಖಾಫಿ ಕರ್ನಾಟಕ, ಸರ್ಫ್ರಾಝ್ ಸಿದ್ದೀಖಿ ಬಿಹಾರ್, ನೌಶಾದ್ ಆಲಂ ಮಿಸ್ಬಾಹಿ ಒಡಿಶಾ, ಡಾ. ಮುಜಾಹಿದ್ ಬಾಷಾ ಮಹಾ ರಾಷ್ಟ್ರ, ಸಾಲಿಕ್ ಅಹ್ಮದ್  ಲತೀಫಿ ಅಸ್ಸಾಂ ನೇತೃತ್ವ ನೀಡಿದರು.

ಇಂದು ಸಂಜೆ ಸಮಾರೋಪ  ಸಮ್ಮೇಳನ ರಾಜಸ್ಥಾನ ಹಜ್ ಕಮೀಟಿ ಚೆಯರ್ಮ್ಯಾನ್ ಮತ್ತು  ಅಜ್ಮೀರ್ ದರ್ಗ  ಅಧ್ಯಕ್ಷರೂ ಆಗಿರುವ ಅಮೀನ್ ಪತಾನ್ ಉದ್ಘಾಟಿಸುವರು. ಇಲಕ್ಷನ್ ಡೈರಕ್ಟರೇಟ್ ನ ನೇತೃತ್ವದಲ್ಲಿ  ಹೊಸ ದೇಶೀಯ ಪದಾಧಿಕಾರಿಗಳನ್ನು ವಿವಿಧ ರಾಷ್ಟ್ರಗಳಿಂದ, ಕೇಂದ್ರ ಆಡಳಿತ ಪ್ರದೇಶಗಳಿಂದಲೂ ಕೌನ್ಸಿಲರ್ ಗಳು ಆಯ್ಕೆ ಮಾಡುವರು. ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಹೊಸ ಸಾರಥಿಗಳನ್ನು ಘೋಷಿಸುವರು.


SHARE THIS

Author:

0 التعليقات: