Thursday, 25 March 2021

ವಿವಾಹ ಅನಾಚಾರಗಳ ವಿರುದ್ಧ ಯುವ ಸಮೂಹ ಶಬ್ದವೆತ್ತಬೇಕು -ಮೌಲಾನಾ ಪೇರೋಡ್ ಉಸ್ತಾದ್


 ವಿವಾಹ ಅನಾಚಾರಗಳ
ವಿರುದ್ಧ ಯುವ ಸಮೂಹ 
ಶಬ್ದವೆತ್ತಬೇಕು

-ಮೌಲಾನಾ ಪೇರೋಡ್ ಉಸ್ತಾದ್

ಕಾಸರಗೋಡು : ಸಮೂಹದಲ್ಲಿ ಅತ್ಯಧಿಕವಾಗಿ ಕಂಡುಬುತ್ತಿರುವ ವಿವಾಹ ದಿನದಂದು ನಡೆಯುವ ಅನಾಚಾರಗಳು ಮತ್ತು ಅನಿಸ್ಲಾಮಿಕ ಕಾರ್ಯಗಳನ್ನು ನಿಲ್ಲಿಸಲು ಯುವ ಸಮೂಹ ತಯಾರಾಗಬೇಕು ಎಂದು ಪ್ರಮುಖ ಭಾಷಣಗಾರ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹೇಳಿದರು.

ಅವರು ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಹದಿನೈದನೇ ಉರೂಸ್ ಮುಬಾರಕಿನ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಆಧ್ಯಾತ್ಮಿಕ ಭಾಷಣ ಮಾಡಿದರು.

ಸೃಷ್ಟಿಕರ್ತನ ಅಸ್ತಿತ್ವವನ್ನು ಅಂಗೀಕರಿಸದವರು ಜಗತ್ತಿನಲ್ಲಿ ಅಪರೂಪ. ಆಕಾಶ ಮತ್ತು ಭೂಮಿಯ ಸೃಷ್ಟಿಕರ್ತನಾದ ಅಲ್ಲಾಹನ ಅಸ್ತಿತ್ವವನ್ನು ನಂಬಲು ವಿಫಲವಾದದ್ದು ಅಜ್ಞಾನದ ಸಂಕೇತವಾಗಿದೆ.

ಅಲ್ಲಾಹನನ್ನು ಪ್ರಶ್ನಿಸುವ ಯುಕ್ತಿವಾದಿಗಳು ಪ್ರಸ್ತುತ  ಸಂದರ್ಭಗಳಲ್ಲಿ ಉತ್ತರ ನೀಡಲು ಸಾಧ್ಯವಿಲ್ಲದೆ ನಿರರ್ಥಕ ವಾದಗಳನ್ನು ಮಾಡುತ್ತಿರುವುದು ವಿರೋಧಾಭಾಸವಾಗಿದೆ ಎಂದು ಅವರು ಹೇಳಿದರು. 

ಸಮಾರಂಭದಲ್ಲಿ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್  ಅಧ್ಯಕ್ಷತೆ ವಹಿಸಿದರು. ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ ಸ್ವಾಗತ ಮತ್ತು  ಉಮರ್ ಸಖಾಫಿ ಕರ್ನೂರ್ ಕೃತಜ್ಞತೆ ಸಲ್ಲಿಸಿದರು.


SHARE THIS

Author:

0 التعليقات: