Tuesday, 9 March 2021

ಶರ್ಟ್ ಬಿಚ್ಚುವ ಉಪಾಯ ಹೇಳಿ ಕೊಟ್ಟಿದ್ದೇ ಜಮೀರ್ ಅಹ್ಮದ್!


 ಶರ್ಟ್ ಬಿಚ್ಚುವ ಉಪಾಯ ಹೇಳಿ ಕೊಟ್ಟಿದ್ದೇ ಜಮೀರ್ ಅಹ್ಮದ್!

ಬೆಂಗಳೂರು: ಶಾಸಕ ಸಂಗಮೇಶ್ ಇತ್ತೀಚೆಗೆ ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ಮುಂದೆ ನಿಂತು ಶರ್ಟ್ ಬಿಚ್ಚಿದ್ದರು. ಇದರ ಹಿಂದಿನ ಸತ್ಯ ಏನು ಎಂಬುದು ಬಯಲಾಗಿದೆ. ಈ ರೀತಿ ವಿಭಿನ್ನ ಉಪಾಯ ಹೇಳಿ ಕೊಟ್ಟಿದ್ದೇ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಮೀರ್ ಅಹ್ಮದ್.

ಈ ಬಗ್ಗೆ ನಿನ್ನೆ ಸೋಮವಾರ ನಡೆದ ಸಿಎಲ್‍ಪಿ ಸಭೆಯಲ್ಲಿ ಚರ್ಚೆಯಾಗಿದೆ. ನೀನು ಅಂಗಿ ಬಿಚ್ಚಿ ಪ್ರತಿಭಟಿಸಿದರೆ ಹೆಚ್ಚು ಪವರ್ ಫುಲ್ ಆಗಿರುತ್ತೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದರು. ಹೀಗಾಗಿ ಬಿಚ್ಚಿದೆ ಎಂದು ಸಂಗಮೇಶ್ ಸಭೆಯಲ್ಲಿದ್ದ ಎಲ್ಲರೆದುರು ಹೇಳಿದ್ದಾರೆ. ಇದಕ್ಕೆ ಕೆರಳಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ 'ಅವನು ಮುಂದೊಮ್ಮೆ ಪ್ಯಾಂಟ್ ಬಿಚ್ಚೋಕೆ ಹೇಳ್ತಾನೆ ಬಿಚ್ತೀಯಾ' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಶಾಸಕ ಸಂಗಮೇಶ್ 'ಅವರು ಬಿಚ್ಚು ಅಂದ್ರು ನಾನು ಬಿಚ್ಚಿದೆ ಅಷ್ಟೇ' ಎಂದಿದ್ದಾರೆ.


SHARE THIS

Author:

0 التعليقات: