Thursday, 11 March 2021

ಬೆಳ್ತಂಗಡಿ: ತಂದೆ ಚಲಾಯಿಸುತ್ತಿದ್ದ ಲಾರಿಯಡಿಗೆ ಬಿದ್ದು ಬಾಲಕ ಮೃತ್ಯು


 ಬೆಳ್ತಂಗಡಿ: ತಂದೆ ಚಲಾಯಿಸುತ್ತಿದ್ದ ಲಾರಿಯಡಿಗೆ ಬಿದ್ದು ಬಾಲಕ ಮೃತ್ಯು

ಬೆಳ್ತಂಗಡಿ : ಉಜಿರೆ ಅತ್ತಾಜೆ‌ ನಿವಾಸಿ ಇಬ್ರಾಹಿಂ ಎಂಬವರ ಪುತ್ರ , ಉಜಿರೆ ಹಳೆಪೇಟೆ ಬದ್ರುಲ್ ಹುದಾ ಮದರಸದ‌ ಮೂರನೇ ತರಗತಿ ವಿದ್ಯಾರ್ಥಿ ಮುರ್ಷಿದ್ (9) ತನ್ನ ತಂದೆಯೇ ಚಲಾಯಿಸುತ್ತಿದ್ದ ಲಾರಿಯಡಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಸಂಜೆಯ ವೇಳೆ ಮೂಡುಬಿದಿರೆಯಲ್ಲಿ ನಡೆದಿದೆ.

 ಇಬ್ರಾಹಿಂ ಅವರು ಮೂಡುಬಿದಿರೆಯ ಕಲ್ಲಿನ‌ಕೋರೆಗೆ ಹೋಗುವಾಗ ಬಾಲಕನೂ ಜೊತೆಗೆ ತೆರಳಿದ್ದನೆಂದು ಹೇಳಲಾಗಿದೆ. 

ತಂದೆಯೇ ಚಾಲಕನಾಗಿ ಲಾರಿ ಚಲಾಯಿಸಿದ ವೇಳೆ ಬಾಲಕ ಆಕಸ್ಮಿಕವಾಗಿ ಅದರ ಚಕ್ರದಡಿ ಸಿಲುಕಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಘಟನೆ ನಡೆದ ತಕ್ಷಣ ಮೂಡುಬಿದಿರೆಯ ಆಸ್ಪತ್ರೆಗೆ ಬಾಲಕನ್ನು ಸಾಗಿಸಲಾಗಿತ್ತಾದರೂ ಅದಾಗಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


SHARE THIS

Author:

0 التعليقات: