ರಸ್ತೆ ಬದಿ ನಿಂತಿದ್ದ ಕ್ಯಾಂಟರ್ ಗೆ ಓಮ್ನಿ ಢಿಕ್ಕಿ: ಮಹಿಳೆ ಸಾವು, ಐವರಿಗೆ ಗಾಯ
ಹುಣಸೂರು: ರಸ್ತೆ ಬದಿಯಲ್ಲಿ ನಿಂತಿದ್ದ ಕ್ಯಾಂಟರ್ ಗೆ ಮಾರುತಿ ಓಮಿನಿ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದರೆ, ಮಹಿಳೆಯ ಪತಿ ಸೇರಿ ಕಾರಿನಲ್ಲಿದ್ದ ಐವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಲ್ಲಿನ ಬಿಳಿಕೆರೆಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಚಿಕ್ಕಬಸವನಹಳ್ಳಿಯ ಬಾಬುರಾವ್ ಪತ್ನಿ ಯಶೋದಮ್ಮ (49) ಮೃತಪಟ್ಟವರು. ಬಾಬು, ಶಾಂತರಾಜು, ರವಿ, ರಂಗೇಗೌಡ, ಮಂಚೇಗೌಡ ಎಂಬವರು ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈಸೂರಿನಲ್ಲಿ ಸಂಬಂಧಿಕರ ಮನೆಗೆ ಬಂದಿದ್ದವರು ವಾಪಾಸ್ ತೆರಳುವ ವೇಳೆ ಘಟನೆ ನಡೆದಿದ್ದು, ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 التعليقات: