ಎಡರನೇ ಡೋಸ್ ಪಡೆದ ಮೇಲೂ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ..!
ನವದೆಹಲಿ : ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದ ನಂತರವೂ ಕೊವೀಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದು ಗುಜರಾತಿನಲ್ಲಿ ಕಂಡು ಬಂದಿದೆ.
ಗುಜರಾತಿನ ದೇಹ್ಗಮ್ ತಾಲೂಕಿನ ಗಾಂಧಿನಗರದ ವ್ಯಕ್ತಿ ಕಳೆದ ಜನವರಿ 16ರಂದು ಮೊದಲ ಡೋಸೆಜ್ ಪಡೆದಿದ್ದು, ನಂತರ ಫೆ. 15ರಂದು ಕೋವಿಡ್ ಲಸಿಕೆಯ ಎರಡನೇ ಡೋಸೆಜ್ ಹಾಕಿಸಿಕೊಂಡಿದ್ದಾರೆ. ಎರಡನೇ ಬಾರಿ ಹಾಕಿಕೊಂಡ ನಂತರ ಫೆ.20ರಂದು ಕೋವಿಡ್ ಇರುವುದು ಧೃಡವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈದ್ಯರು, ಎರಡೂ ಲಸಿಕೆ ಪಡೆದ 45 ದಿನಗಳ ನಂತ್ರ ದೇಹವು ಕೋವಿಡ್ ಜೊತೆ ಹೋರಾಡಲು ಸಿದ್ದವಾಗುತ್ತದೆ ಎಂದಿದ್ದಾರೆ.
0 التعليقات: