ಪ್ರಥಮ ದಿನವೇ, ಜನಸಾಗರವಾದ ಅಹ್ದಲ್ ಉರೂಸ್
ಕಾಸರಗೋಡು: ಮುಹಿಮ್ಮಾತ್ ಸಂಸ್ಥೆಗಳ ಶಿಲ್ಪಿ ಮತ್ತು ಪ್ರಮುಖ ಆಧ್ಯಾತ್ಮಿಕ ಪಂಡಿತರಾಗಿದ್ದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳರ ಹದಿನೈದನೇ ಉರೂಸ್ ಮುಬಾರಕ್ ಪ್ರಯುಕ್ತ ನಡೆದ ಮೊದಲನೇಯ ದಿನದ ಮತ ಪ್ರಭಾಷಣದಲ್ಲಿ ಜನಸಾಗರ. ಪ್ರಮುಖ ಆನ್ಲೈನ್ ಭಾಷಣಗಾರ ಸಫ್ವಾನ್ ಸಖಾಫಿ ಪತ್ತಪ್ಪಿರಿಯಂ ರವರ ಪ್ರಭಾಷಣ ಆಲಿಸಲು ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಜನರು ಬಂದು ಸೇರಿದರು.
ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್ ರವರ ಪ್ರಾರಂಭ ಭಾಷಣದೊಂದಿಗೆ ಆರಂಭವಾದ ಪ್ರಭಾಷಣ ಕಾರ್ಯಕ್ರಮದಲ್ಲಿ ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಕಂದಲ್ ಸೂಫಿ ಮದನಿ, ಮೂಸ ಸಖಾಫಿ ಕಳತ್ತೂರ್, ಅಬೂಬಕರ್ ಕಾಮಿಲ್ ಸಖಾಫಿ ಮುಂತಾದ ಹಲವಾರು ಸಂಘಟನಾ ನಾಯಕರು ಭಾಗವಹಿಸಿದರು.
ಶನಿವಾರ (ಇಂದು) ಸಂಜೆ 4 ಗಂಟೆಗೆ ಮುಹ್ಯಿದ್ದೀನ್ ರಾತೀಬ್ ಮಜ್ಲಿಸಿಗೆ ಸಯ್ಯಿದ್ ಫಕ್ರುದ್ದಿನ್ ಹದ್ದಾದ್ ತಂಙಳ್ ನೇತೃತ್ವ ವಹಿಸುವರು. ರಾತ್ರಿ 8 ಗಂಟೆಗೆ ರಫೀಕ್ ಸಅದಿ ದೇಲಂಪಾಡಿ ಪ್ರಭಾಷಣ ಮಾಡುವರು.
0 التعليقات: