Wednesday, 10 March 2021

ಬೆಂಗಾವಲು ಪಡೆ ಮೇಲೆ ದಾಳಿ: 'ದೀದಿʼ ಕಾಲಿಗೆ ಗಾಯ


ಬೆಂಗಾವಲು ಪಡೆ ಮೇಲೆ ದಾಳಿ:  'ದೀದಿʼ ಕಾಲಿಗೆ ಗಾಯ

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ನಂದಿಗ್ರಾಮದಿಂದ ನಾಮಪತ್ರ ಸಲ್ಲಿಸಿದ್ದು, ತಮ್ಮ ಕ್ಷೇತ್ರದಲ್ಲಿ ಮತ್ತೊಂದು ದಿನ ಉಳಿಯಲು ಯೋಜಿಸಿದ್ರು. ಆದ್ರೆ, ಅವ್ರ ಬೆಂಗಾವಲು ಪಡೆಯ ಮೇಲೆ ದಾಳಿ ನಡೆದಿದ್ದು, ಸಿಎಂ ಕಾಲಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಸಧ್ಯ ಕೋಲ್ಕತ್ತಾಗೆ ಮರಳುತ್ತಿರುವ ಸಿಎಂ ಮಮತಾ, ' ನಾಲ್ಕರಿಂದ ಐದು ಜನ ಬಂದು ನಮ್ಮ ಮೇಲೆ ದಾಳಿ ನಡೆಸಿದರು. ಇದನ್ನ ಹೊರತು ಪಡೆಸಿ ನಾನು ಬೇರೆ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ' ಎಂದರು.

ಈ ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಪಕ್ಷ ಆರೋಪಿಸಿದೆ. ಇನ್ನು ಮಮತಾರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.


SHARE THIS

Author:

0 التعليقات: