Saturday, 6 March 2021

ಬಹಳ ಕಷ್ಟಪಟ್ಟು ಮೇಲೆ ಬಂದಿದ್ದೇವೆ, ಹಾಗಾಗಿ ಷಡ್ಯಂತ್ರ ಮಾಡುತ್ತಿದ್ದಾರೆ: ಬಿ.ಸಿ. ಪಾಟೀಲ್

 

ಬಹಳ ಕಷ್ಟಪಟ್ಟು ಮೇಲೆ ಬಂದಿದ್ದೇವೆ, ಹಾಗಾಗಿ ಷಡ್ಯಂತ್ರ ಮಾಡುತ್ತಿದ್ದಾರೆ: ಬಿ.ಸಿ. ಪಾಟೀಲ್

ಕೊಪ್ಪಳ: ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ನಾವು ರಾಜಿನಾಮೆ‌ ಕೊಟ್ಟು ಬಂದವರು. ಆದರೆ ನಮ್ಮ ಯಶಸ್ಸನು ಸಹಿಸದೆ ಷಡ್ಯಂತ್ರ ಮಾಡಿ ಹಾಳು ಮಾಡಲು ಬಹಳ ಜನ ಕಾಯುತ್ತಿದ್ದಾರೆ. ನಮ್ಮನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಹಾಗಾಗಿ ನಾವು ಕೋರ್ಟ್ ಮೋರೆ ಹೋಗಿದ್ದೇವೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಹೇಳಿದ್ದಾರೆ.

ಗಂಗಾವತಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾವು ಕಷ್ಟಪಟ್ಟು ಮೇಲೆ ಬಂದವರು, ಹೀಗಾಗಿ ನಮ್ಮ ಮೇಲೆ ಬಹಳ ಜನರು ಕಣ್ಣಿಟ್ಟಿದ್ದಾರೆ. ಕಾಲ ಬಹಳ ಕೆಟ್ಟಿದೆ. ನಾವು ಬಹಳ ಕಷ್ಟಪಟ್ಟು ಮೇಲೆ ಬಂದಿದ್ದೇವೆ. ಹಾಗಾಗಿ ನಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಇಂತಹ ಹಲವಾರು ಘಟನೆ ನಡೆದಿವೆ. ನಮಗೆ ಯಾವ ಆತಂಕವೂ ಇಲ್ಲ, ಅಪಖ್ಯಾತಿ ತರುವ ಜನ ಬಹಳ ಇದ್ದಾರೆ. ಸತ್ಯ ಹೊಸಲು ದಾಟಿ ಬರುವುದರೊಳಗಡೆ ಸುಳ್ಳು ಊರೆಲ್ಲ ಸುತ್ತಾಡಿ ಬಿಡುತ್ತದೆ. ಹಾಗಾಗಿ ನಮ್ಮ ತೇಜೋವಧೆ ತಪ್ಪಿಸಲು ಕೋರ್ಟ ಮೋರೆ ಹೋಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮೊಬೈಲ್ ನಲ್ಲೆ ಬ್ಯುಸಿ: ಗಂಗಾವತಿಯಲ್ಲಿ ನಡೆದ ಕೃಷಿ‌ ಕಾಲೇಜು ಉದ್ಘಾಟನಾ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದ ಸಚಿವ ಬಿ ಸಿ ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಮೊಬೈಲ್ ನಲ್ಲೆ ಪುಲ್ ಬ್ಯುಸಿಯಾಗಿದ್ದರು. ಪದೇ ಪದೆ‌ ಮೊಬೈಲ್ ನೋಡಿಕೊಳ್ಳುತ್ತಿದ್ದರು.


SHARE THIS

Author:

0 التعليقات: