Friday, 5 March 2021

ಅಂಬಾನಿ ಮನೆ ಸಮೀಪ ವಾಹನದಲ್ಲಿ ಸ್ಪೋಟಕ ಪತ್ತೆ ಪ್ರಕರಣ । ಸ್ಕಾರ್ಪಿಯೋ ಮಾಲಿಕ ಮೃತ್ಯು !


ಅಂಬಾನಿ ಮನೆ ಸಮೀಪ ವಾಹನದಲ್ಲಿ ಸ್ಪೋಟಕ ಪತ್ತೆ ಪ್ರಕರಣ । ಸ್ಕಾರ್ಪಿಯೋ ಮಾಲಿಕ ಮೃತ್ಯು !

ಕಳೆದ ವಾರ ವಿಶ್ವದ ಅತ್ಯಂತ ಶ್ರೀಮಂತರಲ್ಲೊಬ್ಬರಾದ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯ ನಿವಾಸ “ಅಂಟಲಿಯಾ” ಬಳಿ ಕಾರ್ಮೈಕಲ್ ರಸ್ತೆಯಲ್ಲಿ ಸುಮಾರು 2.5 ಕೆಜಿ ಜಿಲೆಟಿನ್ ಕಡ್ಡಿಗಳನ್ನು ಹೊಂದಿರುವ ಸ್ಕಾರ್ಪಿಯೋ ಪತ್ತೆಯಾಗಿತ್ತು. ನಂತರ ಅದರ ಮಾಲಿಕ ಹಿರೆನ್ ಮನ್ಸುಖ್ ಅವರು ಅಂದೇ ಮಧ್ಯಾಹ್ನ ದಕ್ಷಿಣ ಮುಂಬೈನ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದರು.

ಜಿಲೆಟಿನ್ ಪತ್ತೆಯಾಗಿದ್ದ ಸ್ಕಾರ್ಪಿಯೋ ಮಾಲಕ ಥಾಣೆ ನಿವಾಸಿ ಮನ್ಸುಖ್ ಆವರು ಇಂದು ಮರಣಹೊಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ. ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಇಷ್ಟೇ ಮಾಹಿತಿಯನ್ನು ಪೊಲೀಸರು ಹೊರಬಿಟ್ಟಿದ್ದು, ಸಾವಿಗೆ ಸ್ಪಷ್ಟ ಕಾರಣಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಾಗಿದೆSHARE THIS

Author:

0 التعليقات: