ಗಡಿಕೇಶ್ವರದಲ್ಲಿ ಕೇಳಿಸಿದ ಭಾರಿ ಶಬ್ದ : ಭೂಕಂಪದ ಅನುಭವ ; ಆತಂಕದಲ್ಲಿ ಜನತೆ
ಕಲಬುರಗಿ: ಭೂಮಿಯಿಂದ ಭಾರಿ ಶಬ್ದ ಕೇಳಿಬಂದಿದ್ದರಿಂದ ಬೆಚ್ಚಿದ ಜನರು ಮನೆಯಿಂದ ಹೊರಗೋಡಿ ಬಂದ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ನಡೆದಿದೆ.
ಭಾರಿ ಶಬ್ದ ಕೇಳಿ ಭೂಮಿ ಕಂಪಿಸಿದ್ದರಿಂದ ಜನರು ಬೆದರಿ ಗಡಿಬಿಡಿಯಿಂದ ಮನೆಯಿಂದ ಹೊರಬಂದಿದ್ದಾರೆ. ರಾತ್ರಿ 8.20ರ ಸುಮಾರಿಗೆ ಈ ಜೋರಾದ ಸದ್ದು ಕೇಳಿಸಿದ್ದು, ಜನರಿಗೆ ಭೂಮಿ ಕಂಪಿಸಿದಂಥ ಅನುಭವವೂ ಆಗಿದೆ ಎನ್ನಲಾಗಿದೆ. ಭೂಮಿ ಕಂಪಿಸಿದ್ದರಿಂದ ಮನೆಯಲ್ಲಿದ್ದ ಪಾತ್ರೆಗಳೆಲ್ಲ ಅಲುಗಾಡಿ ಕೆಳಗುರುಳಿವೆ ಎಂದು ಜನರು ತಿಳಿಸಿದ್ದಾರೆ. ಗಡಿಕೇಶ್ವರ ಗ್ರಾಮದಲ್ಲಿ ಫೆ. 21ರಂದು ಮೂರು ಸಲ ಇಂಥದ್ದೇ ಶಬ್ದ ಕೇಳಿಬಂದಿದ್ದು, ಇದೀಗ ಮತ್ತೆ ಶಬ್ದ ಕೇಳಿಬಂದಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
0 التعليقات: