Sunday, 7 March 2021

ರಾಜ್ಯ ಬಜೆಟ್ ಇಂದು : ಸಿಎಂ ಯಡಿಯೂರಪ್ಪರತ್ತ ರಾಜ್ಯದ ಚಿತ್ತ


ರಾಜ್ಯ ಬಜೆಟ್ ಇಂದು : ಸಿಎಂ ಯಡಿಯೂರಪ್ಪರತ್ತ ರಾಜ್ಯದ ಚಿತ್ತ 

ಬೆಂಗಳೂರು : ರಾಜ್ಯದ ಬಹು ನಿರೀಕ್ಷೆಯ 2021-22 ನೇ ಸಾಲಿನ ರಾಜ್ಯ ಬಜೆಟ್ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಂಡನೆ ಮಾಡಲಿದ್ದಾರೆ . ಇಂದು ಮಧ್ಯಾಹ್ನ 12 ಗಂಟೆಗೆ ಮಂಡನೆ ಮಾಡುತ್ತಿರುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ .

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ರಾಜ್ಯ ಸರ್ಕಾರದ ಬಜೆಟ್ ಮಂಡಿಸಲಿದ್ದು, ಕೊರೊನಾ ಕಾರಣದಿಂದಾಗಿ ದೇಶದ ಆರ್ಥಿಕತೆ ಕುಸಿದಿದ್ದು, ಕರ್ನಾಟಕದ ಮೇಲೂ ಇದರ ಪ್ರಭಾವ ಸಾಕಷ್ಟು ಪ್ರಮಾಣದಲ್ಲಿ ಆಗಿದೆ. ಈ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಮಂಡಿಸಲಿರುವ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಇಂದು 12 ಗಂಟೆಗೆ ವಿಧಾನಸಭೆಯಲ್ಲಿ ಹಣಕಾಸು ಖಾತೆ ಹೊಂದಿರುವ ಯಡಿಯೂರಪ್ಪ ಮಂಡನೆ ಮಾಡಲಿರುವ ಬಜೆಟ್ ಅಭಿವೃದ್ಧಿಯ ಮುನ್ನೋಟವನ್ನು ತೆರೆದಿಡಲಿದೆ.

ಈ ಬಾರಿ ಬಜೆಟ್ ನಲ್ಲಿ ಆದಾಯ ಕೊರತೆ ಕಾಡುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ, ಆದಾಯ, ಸಂಪನ್ಮೂಲ ಸಂಗ್ರಹಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಕೋವಿಡ್-19ನಿಂದಾಗಿ ತೆರಿಗೆ ಸಂಗ್ರಹ ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ತೀವ್ರ ಕುಸಿದಿದೆ. ಸರ್ಕಾರ ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು 6 ಸಾವಿರ ಕೋಟಿ ರೂಪಾಯಿ ವ್ಯಯಿಸಬೇಕಾಗಿದೆ ಹೇಳಿದ್ದಾರೆ.

ಇನ್ನು ಈ ಬಾರಿಯ ಬಜೆಟ್ ನಲ್ಲಿ ಮಹಿಳೆಯರಿಗೆ, ರೈತರಿಗೆ ವಿಶೇಷ ಕಾರ್ಯಕ್ರಮ ಘೋಷಣೆ, ಕೃಷಿ, ಪ್ರವಾಸೋದ್ಯಮ, ನೀರಾವರಿಗೆ ಒತ್ತು ನೀಡುವ ಸಂಭವವಿದೆ ಇದೆ ಎನ್ನಲಾಗಿದೆ. 


SHARE THIS

Author:

0 التعليقات: