Saturday, 6 March 2021

ದೀದಿ ವಿರುದ್ದ ಸ್ಪರ್ಧಿಸುವುದಾಗಿ ಸುವೇಂದು ಅಧಿಕಾರಿ


ದೀದಿ ವಿರುದ್ದ ಸ್ಪರ್ಧಿಸುವುದಾಗಿ ಸುವೇಂದು ಅಧಿಕಾರಿ

ನವದೆಹಲಿ: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಶನಿವಾರ ನಂದಿಗ್ರಾಮದಿಂದ ತನ್ನ ಅಭ್ಯರ್ಥಿಯನ್ನಾಗಿ ಸುವೇಂದು ಅಧಿಕಾರಿಯನ್ನು ಘೋಷಿಸಿದ್ದು, ಅಂದ ಹಾಗೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ನಂದಿಗ್ರಾಮದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ದಶಕದ ಹಿಂದೆ ತೃಣಮೂಲ ಕಾಂಗ್ರೆಸ್ ಉದಯಕ್ಕೆ ನಂದಿಗ್ರಾಮ್‌ ಹೋರಾಟ ಮಹತ್ವದ್ದಾಗಿತ್ತು, 2011ರಲ್ಲಿ ಟಿಎಂಸಿ ಎಡರಂಗ ಸರ್ಕಾರವನ್ನು ಸೋಲಿಸಿದ ಭೂಸ್ವಾಧೀನ ವಿರೋಧಿ ಚಳುವಳಿಯಲ್ಲಿ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೇಂದು ಅಧಿಕಾರಿ ಪ್ರಮುಖ ಪಾತ್ರ ವಹಿಸಿದ್ದರು.

ಇನ್ನೂ ಪ.ಬಂಗಾಳ ಚುನಾವಣೆ ಸಲುವಾಗಿ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಗಳು 57 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು, ಈ ಪೈಕಿ 6 ಅಭ್ಯರ್ಥಿಗಳ ಹೆಸರನ್ನು ಮಹಿಳೆಯರಿಗೆ ನೀಡಲಾಗಿದೆ. ಆಲ್ ಜಾರ್ಖಂಡ್ ವಿದ್ಯಾರ್ಥಿ ಸಂಘಕ್ಕೆ 1 ಸ್ಥಾನ ನೀಡಲಾಗಿದೆ ಎನ್ನಲಾಗಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಶನಿವಾರ ಪ.ಬಂಗಾಳ ವಿಧಾನಸಭೆಗೆ ಸ್ಪರ್ಧೆ ಮಾಡುವ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿ ಮಾಧ್ಯಮಗಳ ಜೊತೆಗೆ ಮಾತನಾಡಿ, ನಾನು ಇತ್ತೀಚೆಗೆ ದುರ್ಗಾಪುರಕ್ಕೆ ಭೇಟಿ ನೀಡಿದ್ದೆ ಮತ್ತು ಜನರು ಬದಲಾವಣೆ ಬಯಸುತ್ತಿರುವುದನ್ನು ನಾನು ನೋಡಿದ್ದೇನೆ. ಈಗಿನ ಸರ್ಕಾರದಿಂದ ನಾವು ದಬ್ಬಾಳಿಕೆಯಿಂದ ಮುಕ್ತರಾಗಬೇಕೆಂದು ಅವರು ಬಯಸುತ್ತಾರೆ ಅಂತ ಹೇಳಿದ್ದಾರೆ.
SHARE THIS

Author:

0 التعليقات: