Wednesday, 3 March 2021

ಸದನದಿಂದ ದೂರ ಉಳಿದ 'ಜಾರಕಿಹೊಳಿ ಬ್ರದರ್ಸ್'


 ಸದನದಿಂದ ದೂರ ಉಳಿದ 'ಜಾರಕಿಹೊಳಿ ಬ್ರದರ್ಸ್'

ಬೆಂಗಳೂರು : ವಿಧಾನ ಮಂಡಲದ ಬಜೆಟ್ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಮಾರ್ಚ್ 8ರಂದು ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಂಡಿಸಲಿದ್ದಾರೆ. ಇಂತಹ ಬಜೆಟ್ ಅಧಿವೇಶನ ಆರಂಭಗೊಂಡರು, ಸದನದಿಂದ ಜಾರಕಿಹೊಳಿ ಬ್ರದರ್ಸ್ ಗೈರಾಗಿ, ದೂರ ಉಳಿದಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಿಡುಗಡೆಯ ನಂತ್ರ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಉಂಟಾಗಿತ್ತು. ಇದೇ ಕಾರಣದಿಂದಾಗಿ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ಕೂಡ ನೀಡಿದ್ದರು. ಇದೇ ಸಂದರ್ಭದಲ್ಲಿ ಇಂದಿನಿಂದ ವಿಧಾನ ಮಂಡಲದ ಕಲಾಪ ಆರಂಭಗೊಂಡಿದೆ.

ಇಂತಹ ವಿಧಾನಮಂಡಲದ ಸದನದಲ್ಲಿ ಸೆಕ್ಸ್ ಸಿಡಿ ಬಿಡುಗಡೆ ನಂತ್ರ ರಾಜೀನಾಮೆ ನೀಡಿ, ಸಂಪುಟದಿಂದ ಹೊರನಡೆದಿರುವಂತ ಅವರು, ಸದನಕ್ಕೆ ಗೈರು ಹಾಜರಾಗಿದ್ದಾರೆ. ಅವರೊಂದಿಗೆ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಕೂಡ ಗೈರು ಹಾಜರಾಗಿದ್ದಾರೆ. ಇವರೊಂದಿಗೆ ಕಾಂಗ್ರೆಸ್ ನ ತನ್ವೀರ್ ಸೇಠ್ ಕೂಡ ಗೈರು ಹಾಜರಾಗಿದ್ದಾರೆ.


SHARE THIS

Author:

0 التعليقات: