Sunday, 14 March 2021

ತಾಜ್ ಮಹಲ್;‘ರಾಮ ಮಹಲ್’ ಎಂದು ಮರುನಾಮಕರಣ : ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ


ತಾಜ್ ಮಹಲ್;‘ರಾಮ ಮಹಲ್’ ಎಂದು ಮರುನಾಮಕರಣ : ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ

ಆಗ್ರಾ : ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ ಅನ್ನು ಶೀಘ್ರದಲ್ಲೇ ರಾಮ ಮಹಲ್ ಎಂದು ಮರುನಾಮಕರಣ ಮಾಡಲಾಗುವುದು ಎಂದು ಬಲಿಯಾ ಜಿಲ್ಲೆಯ ಬೈರಿಯಾದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶಿವಾಜಿಯ ಕುಲಕ್ಕೆ ಸೇರಿದವರಾಗಿರುವುದರಿಂದ ಅವರು ಖಂಡಿತವಾಗಿಯೂ ತಾಜ್ ಮಹಲ್ ಹೆಸರನ್ನು ರಾಮ ಮಹಲ್ ಅಥವಾ ಶಿವ ಮಹಲ್ ಎಂದು ಮರುನಾಮಕರಣ ಮಾಡಲಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಹೇಳಿದ್ದಾರೆ.

ಇತ್ತೀಚೆಗೆ ಐತಿಹಾಸಿಕ ಮತ್ತು ಜಗತ್ ಪ್ರಸಿದ್ಧ ತಾಜ್‌ಮಹಲ್‌ ಆವರಣದೊಳಗೆ ಭಗವಾಧ್ವಜ ಹಾರಿಸಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಮತ್ತು ಶಿವರಾತ್ರಿ ಹಬ್ಬದ ಪ್ರಯುಕ್ತ ಶಿವಪೂಜೆ ಮಾಡಲು ಮುಂದಾಗಿದ್ದ ಹಿಂದೂ ಮಹಾಸಭಾದ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇವರ ಕೃತ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. SHARE THIS

Author:

0 التعليقات: