Tuesday, 9 March 2021

ನನ್ನ ಹೆಸರಿನಲ್ಲಿಯೂ ರಾಮನಿದ್ದಾನೆ;ರಾಮನನ್ನು ನೀವು ಗುತ್ತಿಗೆ ತೆಗೆದುಕೊಂಡಿಲ್ಲ: ಸಿದ್ದರಾಮಯ್ಯ


ನನ್ನ ಹೆಸರಿನಲ್ಲಿಯೂ ರಾಮನಿದ್ದಾನೆ;

ರಾಮನನ್ನು ನೀವು ಗುತ್ತಿಗೆ ತೆಗೆದುಕೊಂಡಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ರಾಮನನ್ನ ನೀವೇನಾದ್ರು ಗುತ್ತಿಗೆ ತೆಗೆದುಕೊಂಡಿದ್ದೀರೇನ್ರೀ? ನನ್ನ ಹೆಸರಿನಲ್ಲಿಯೂ ರಾಮನಿದ್ದಾನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಸವರಾಜ ಬೊಮ್ಮಾಯಿಗೆ ಟಾಂಗ್ ಕೊಟ್ಟಿದ್ದಾರೆ.

ವಿಧಾನಸಭೆಯ ಕಲಾಪದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ಟ್ವೀಟ್ ಪ್ರಸ್ತಾಪಿಸಿ ‘ರಾಮನ ಭಾರತದಲ್ಲಿ ಲೀಟರ್‌ ಪೆಟ್ರೋಲ್ ಬೆಲೆ 93 ರೂ.; ಸೀತೆಯ ನೇಪಾಳದಲ್ಲಿ ಲೀಟರ್​ ಪೆಟ್ರೋಲ್ ದರ 51 ರೂ.; ರಾವಣನ ಶ್ರೀಲಂಕಾದಲ್ಲಿ ಲೀಟರ್​​ ಪೆಟ್ರೋಲ್ ದರ 53ರೂಪಾಯಿ’ ಎಂದು ಅವರು ಬಿಜೆಪಿಯ ಕಾಲೆಳೆದಿದ್ದಾರೆ.

ಆಗ, ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿಮ್ಮ ಬಾಯಲ್ಲಿ ‘ಜೈಶ್ರೀರಾಮ್’ ಎಂದು ಕೇಳುವುದು ಚೆಂದ ಎಂದು ಟಾಂಗ್​ ಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ರಾಮನನ್ನು ನೀವೇನಾದ್ರು ಗುತ್ತಿಗೆ ತೆಗೆದುಕೊಂಡಿದ್ದೀರೇನ್ರೀ? ನನ್ನ ಹೆಸರಿನಲ್ಲಿಯೂ ರಾಮನಿದ್ದಾನೆ” ಎಂದು ತಿರುಗೇಟು ನೀಡಿದ್ದಾರೆ.SHARE THIS

Author:

0 التعليقات: