Wednesday, 3 March 2021

ಬೆಂಗಳೂರು: ಕಾಂಗ್ರೆಸ್ ನಿಂದ 'ಜನಧ್ವನಿ ಜಾಥಾ'ಕ್ಕೆ ಚಾಲನೆ

 

ಬೆಂಗಳೂರು: ಕಾಂಗ್ರೆಸ್ ನಿಂದ 'ಜನಧ್ವನಿ ಜಾಥಾ'ಕ್ಕೆ ಚಾಲನೆ

ಬೆಂಗಳೂರು, ಮಾ.3: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ವೈಫಲ್ಯಗಳ ವಿರುದ್ಧ ಜನಾಭಿಪ್ರಾಯ ರೂಪಿಸುವುದಕ್ಕಾಗಿ ಕೆಪಿಸಿಸಿ ಆರಂಭಿಸಿರುವ 'ಜನಧ್ವನಿ ಜಾಥಾ'ಕ್ಕೆ ಕೆಪಿಸಿಸಿ ಕಚೇರಿ ಮುಂಭಾಗದಲ್ಲಿಂದು ಚಾಲನೆ ನೀಡಲಾಯಿತು.

 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ ಖಂಡ್ರೆ, ರಾಮಲಿಂಗಾರ ರೆಡ್ಡಿ, ಧ್ರುವನಾರಾಯಣ್ ಮತ್ತಿತರ ಮುಖಂಡರು ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ ಪೂಜೆ ಸಲ್ಲಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.


SHARE THIS

Author:

0 التعليقات: