Monday, 1 March 2021

ಆಪಲ್‌ ಪೋನ್‌ ನಿರೀಕ್ಷೆಯಲ್ಲಿದ್ದ ಮಹಿಳೆಗೆ ಬಂದ ಪಾರ್ಸೆಲ್ʼ‌ನಲ್ಲಿ ಆಪಲ್ ಫ್ಲೇವರ್ ಹೊಂದಿದ ಮೊಸರು!


 ಆಪಲ್‌ ಪೋನ್‌ ನಿರೀಕ್ಷೆಯಲ್ಲಿದ್ದ ಮಹಿಳೆಗೆ ಬಂದ  ಪಾರ್ಸೆಲ್ʼ‌ನಲ್ಲಿ ಆಪಲ್ ಫ್ಲೇವರ್ ಹೊಂದಿದ 
ಮೊಸರು!

ಹಾಂಕಾಂಗ್: ಐ ಫೋನ್ ಕೊಳ್ಳಲು ಹಲವರು ಹವಣಿಸುತ್ತಿರುತ್ತಾರೆ. ಅದರಲ್ಲೂ ಐಫೋನ್ 12 ಮಾಡೆಲ್ ನ್ನು ಕಳೆದ‌ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಿದ್ದು, ವಿಶ್ವಾದ್ಯಂತ ಸಾವಿರಾರು ಜನ ಅದಕ್ಕಾಗಿ ಕಾಯುತ್ತಿದ್ದಾರೆ.

ಚೀನಾದಲ್ಲಿ 1.14 ಲಕ್ಷ ನೀಡಿ ಐ ಫೋನ್ 12 ಪ್ರೊ ಮ್ಯಾಕ್ಸ್ ಮೊಬೈಲ್ ನ್ನು ಆನ್ ಲೈನಲ್ಲಿ ಆರ್ಡರ್ ಮಾಡಿದ್ದ ಮಹಿಳೆಗೆ ಶಾಕ್ ಕಾದಿತ್ತು. ಐ ಫೋನ್ ಬರುವ ಬದಲು ಪ್ಯಾಕ್ ನಲ್ಲಿ ಆಯಪಲ್ ಫ್ಲೇವರ್ ಹೊಂದಿದ ಮೊಸರು ಬಂದಿದೆ. ಮಹಿಳೆ ಲಿಯೊ ಅದರ ವಿಡಿಯೋವನ್ನು ಚೀನಾದ ಸಾಮಾಜಿಕ ಜಾಲತಾಣ ವೈಬ್ ನಲ್ಲಿ ಹಾಕಿದ್ದಾರೆ. ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಕೋರಿಯರ್ ಕಂಪನಿ ಈ ಕುರಿತು ಪರಿಶೀಲಿಸಲಾಗುವುದು ಎಂದು ಸ್ಪಷ್ಟನೆ ನೀಡಿದೆ. ಈ ಘಟನೆ ನಡೆಯುತ್ತಿದ್ದಂತೆ ಚೀನಾ ಪೊಲೀಸರೂ ವಂಚಕರಿಗಾಗಿ ಹುಡುಕಾಟ ನಡೆಸಿದ್ದಾರೆ.


SHARE THIS

Author:

0 التعليقات: