Sunday, 21 March 2021

ತ್ವಾಹಿರುಲ್ ಅಹ್ದಲ್ ತಂಙಳ್ ಉರೂಸ್ ಮುಬಾರಕಿಗೆ, ಭಾರಿ ಜನಸಾಗರ! ಸೋಮವಾರ ರಾತ್ರಿ ಲತೀಫ್ ಸಖಾಫಿ ಕಾಂತಪುರಂ ಪ್ರಭಾಷಣ ಮಾಡುವರು


 ತ್ವಾಹಿರುಲ್ ಅಹ್ದಲ್ ತಂಙಳ್ ಉರೂಸ್ ಮುಬಾರಕಿಗೆ,   ಭಾರಿ ಜನಸಾಗರ!   ಸೋಮವಾರ ರಾತ್ರಿ ಲತೀಫ್ ಸಖಾಫಿ ಕಾಂತಪುರಂ ಪ್ರಭಾಷಣ ಮಾಡುವರು

ಕಾಸರಗೋಡು: ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಹದಿನೈದನೇ ಉರೂಸ್ ಮುಬಾರಕಿಗೆ ಜನಸಾಗರ. ಕೇರಳದ ರಾಜಧಾನಿಯಿಂದಲೂ ಇನ್ನಿತರ ಜಿಲ್ಲೆಗಳಿಂದಲೂ ಹಲವಾರು ಜನರು ಉರೂಸ್ ಮುಬಾರಕಿಗೆ ತಲುಪುತ್ತಿದ್ದಾರೆ. ಕಷ್ಟಗಳು ದೂರವಾಗಲು ರೋಗ ಶಮನದ ಉದ್ದೇಶದಿಂದ ದರ್ಗಾಕ್ಕೆ ಸಕ್ಕರೆ ಮತ್ತು ಇನ್ನಿತರ ಆಹಾರ ಧಾನ್ಯ ವಸ್ತುಗಳು ನೇರ್ಚೆಯಾಗಿ ಲಭಿಸುತ್ತದೆ. ಶುಕ್ರವಾರ ಪ್ರಾರಂಭಿಸಿದ ಖತ್ಮುಲ್ ಕುರ್ಆನ್ ಮಜ್ಲಿಸ್, ಆಧ್ಯಾತ್ಮಿಕ ಅನುಭವ ನೀಡುತ್ತಿದೆ.

ಮುಹಿಮ್ಮಾತ್ ಸಂಸ್ಥೆಯ 1500 ಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ಹೊರತಾಗಿ  ವಿವಿಧ ನಾಡುಗಳಿಂದ ಬರುವ ವಿದ್ಯಾರ್ಥಿಗಳು ಮತ್ತು ಪಂಡಿತರು ಕಾರ್ಯಕ್ರಮದಲ್ಲಿ ಭಾಗವಹೀಸುತ್ತಿದ್ದಾರೆ.  

ಪ್ರಮುಖ ಆನ್ಲೈನ್ ಭಾಷಣಗಾರ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ನಾಳೆ ರಾತ್ರಿ 8 ಗಂಟೆಗೆ ಪ್ರಭಾಷಣ ಮಾಡುವರು. ಪ್ರಭಾಷಣ ಆಲಿಸಲು ನಾಳೆ ಸಹಸ್ರಾರು ಜನರು ಉರೂಸ್ ನಗರಕ್ಕೆ ತಲುಪುವರು. ಮಹಿಳೆಯರಿಗೂ ಪ್ರಭಾಷಣ ಆಲಿಸಲು ಬರುವ ಇನ್ನಿತರರಿಗೂ ವಿಶಾಲವಾದ ಸೌಕರ್ಯವಾಗಿದೆ ತಯಾರು ಮಾಡಲಾಗಿರುವುದು.


SHARE THIS

Author:

0 التعليقات: