Sunday, 21 March 2021

ಮಹಾರಾಷ್ಟ್ರ ಗೃಹಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪವು 'ಗಂಭೀರವಾದದ್ದು': ಶರದ್ ಪವಾರ್


 ಮಹಾರಾಷ್ಟ್ರ ಗೃಹಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪವು 'ಗಂಭೀರವಾದದ್ದು': ಶರದ್ ಪವಾರ್

ಹೊಸದಿಲ್ಲಿ: ಮಹಾರಾಷ್ಟ್ರ ಗೃಹಸಚಿವ ಅನಿಲ್‌ ದೇಶ್‌ ಮುಖ್‌ ರ ವಿರುದ್ಧ ಮಾಡಿರುವ ಭ್ರಷ್ಟಾಚಾರ ಪ್ರಕರಣವು ಗಂಭೀರವಾದದ್ದು ಎಂದು ಎನ್‌ʼಸಿಪಿ ಪಕ್ಷದ ಮುಖಂಡ ಶರದ್‌ ಪವಾರ್‌ ಹೇಳಿಕೆ ನೀಡಿದ್ದಾರೆ. ಈ ನಡುವೆ ಈ ಪ್ರಕರಣವನ್ನು ಈಗ ಬಹಿರಂಗಪಡಿಸುವ ಉದ್ದೇಶವೇನು? ಎಂದು ರಾಜ್ಯ ಪೊಲೀಸ್‌ ಮುಖಂಡ ಪರಂ ಬೀರ್‌ ಸಿಂಗ್‌ ಮಾಡಿರುವ ಆರೋಪಗಳ ಕುರಿತು ಅವರು ಪ್ರಶ್ನಿಸಿದ್ದಾರೆ.

"ಗೃಹ ಸಚಿವರ ವಿರುದ್ಧದ ಆರೋಪಗಳು ಗಂಭೀರವಾಗಿವೆ. 100 ಕೋಟಿ ಸಂಗ್ರಹಿಸಲು ಗೃಹಮಂತ್ರಿಗಳು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ ಎಂಬ ಆರೋಪಗಳಿವೆ. ಹಣದ ನಿಜವಾದ ವಹಿವಾಟಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾವುದೇ ಹಣವನ್ನು ಗೃಹ ಸಚಿವರು ಅಥವಾ ಅವರ ಸಿಬ್ಬಂದಿಗೆ ವರ್ಗಾಯಿಸಲಾಗಿದೆಯೆಂದು ಮಾಹಿತಿ ಇಲ್ಲ" ಎಂದು ಶರದ್ ಪವಾರ್‌ ಹೇಳಿಕೆ ನೀಡಿದ್ದಾರೆ.

ಈ ಕುರಿತಾದಂತೆ ಸ್ವತಂತ್ರ ತನಿಖೆಯನ್ನು ನಡೆಸಲು ನಾನು ಮಾಜಿ ಪ್ರಮುಖ ಪೊಲೀಸ್‌ ಅಧಿಕಾರಿಯಾಗಿದ್ದ ಜೂಲಿಯೋ ರಿಬೈರ್‌ ರಿಗೆ ಸೂಚಿಸುವುದಾಗಿ ಹೇಳಿದ ಶರದ್‌ ಪವಾರ್, ದೇಶ್‌ ಮುಖ್‌ ವಿರುದ್ಧ ಮಾಡಿರುವ ಆರೋಪವು ಗಂಭೀರವಾಗಿದೆ ಎಂದು ಹೇಳಿದರು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್‌ ದೇಶ್‌ ಮುಖ್‌ ರ ರಾಜೀನಾಮೆಗೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸೂಚನೆ ನೀಡುವ ಸಾಧ್ಯತೆ ಇದೆಯೆಂದು ಉನ್ನತ ಮೂಲಗಳಿಂದ ಮಾಹಿತಿ ದೊರಕಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ. ಈ ಕುರಿತಾದಂತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿರುವುದಾಗಿ ನಾಯಕರು ತಿಳಿಸಿದ್ದಾರೆಂದು ವರದಿ ಉಲ್ಲೇಖಿಸಿದೆ.


SHARE THIS

Author:

0 التعليقات: