Tuesday, 2 March 2021

ಇಂದಿರಾ ಗಾಂಧಿ ಕುಟುಂಬದ ಕುಡಿಗೆ ಟೀ ಎಸ್ಟೇಟ್​ನಲ್ಲಿ ಕೆಲಸ! ವೈರಲ್​ ಆಯ್ತು ಪ್ರಿಯಾಂಕಾ ವಿಡಿಯೋ

 

ಇಂದಿರಾ ಗಾಂಧಿ ಕುಟುಂಬದ ಕುಡಿಗೆ ಟೀ ಎಸ್ಟೇಟ್​ನಲ್ಲಿ ಕೆಲಸ! ವೈರಲ್​ ಆಯ್ತು ಪ್ರಿಯಾಂಕಾ ವಿಡಿಯೋ

ದಿಸ್ಪುರ: ಪಂಚ ರಾಜ್ಯಗಳ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅಸ್ಸಾಂ ಪ್ರವಾಸದಲ್ಲಿದ್ದು, ಅಲ್ಲಿ ತಮ್ಮ ಸಹೋದರ ರಾಹುಲ್​ ಗಾಂಧಿಯವರ ಹಾದಿಯನ್ನೇ ಅವರು ತುಳಿದಿದ್ದಾರೆ. ಟೀ ಎಸ್ಟೇಟ್​ ಕೆಲಸಗಾರರೊಂದಿಗೆ ಚಹಾ ಎಲೆ ಕೀಳುವ ಕೆಲಸ ಮಾಡಿದ್ದು, ಆ ವಿಡಿಯೋ ಇದೀಗ ಸಕತ್​ ವೈರಲ್​ ಆಗಿದೆ.

ಪ್ರಿಯಾಂಕಾ ಅವರು ಅಸ್ಸಾಂದಲ್ಲಿ ಎರಡು ದಿನಗಳ ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ಬಿಸ್ವಾನಾಥದ ಸಾಧಾರು ಚಹಾ ಎಸ್ಟೇಟ್​ಗೆ ಭೇಟಿ ನೀಡಿದರು. ಅಲ್ಲಿನ ಕೆಲಸಗಾರರೊಂದಿಗೆ ಮಾತನಾಡಿ ಅವರ ಕಷ್ಟ ಸುಖಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಅದಾದ ನಂತರ ಕೆಲಸಗಾರರೊಂದಿಗೆ ಸೇರಿ ಚಹಾ ಎಲೆ ಕಿತ್ತಿದ್ದಾರೆ. ಇಲ್ಲಿನ ಜನರು ನನಗೆ ತೋರಿದ ಪ್ರೀತಿಯನ್ನು ನಾನು ಜೀವನದಲ್ಲಿ ಮರೆಯುವುದಿಲ್ಲ. ಚಹಾ ಎಸ್ಟೇಟ್​ ಕಾರ್ಮಿಕರ ಜೀವನವು ಸತ್ಯ ಮತ್ತು ಸರಳತೆಯಿಂದ ತುಂಬಿದೆ ಮತ್ತು ಅವರ ಶ್ರಮ ದೇಶಕ್ಕೆ ಅಮೂಲ್ಯವಾದುದು ಎಂದು ಅವರು ಹೇಳಿದ್ದಾರೆ.

ಅದರ ಜತೆ ಪ್ರಿಯಾಂಕಾ ಅವರು ಪ್ರಸಿದ್ಧ ಕಾಮಖ್ಯಾ ದೇವಸ್ಥಾನದಲ್ಲಿ ಪ್ರಾರ್ಥನೆಕ್ಕೆ ಭೇಟಿ ನೀಡಿದ್ದಾರೆ.ಶ್ರೀಮಾಂತ ಶಂಕರದೇವ ಅವರ ಪ್ರಾಥಮಿಕ ಶಿಷ್ಯ ಶ್ರೀ ಮಾಧವ್‌ದೇವ್ ಅವರ ಜನ್ಮಸ್ಥಳವನ್ನು ಲೆಟೆಕುಪುಖುರಿಗೆ ಭೇಟಿ ನೀಡಿದರು. ಸ್ವಾತಂತ್ರ್ಯ ಹೋರಾಟಗಾರ ಕನಕಲತಾ ಬರುವಾ ಅವರ ಪ್ರತಿಮೆಗೆ ಗೌರವ ಸಲ್ಲಿಸಿದರು.

ಕೆಲ ದಿನಗಳ ಹಿಂದೆ ಪ್ರಿಯಾಂಕಾ ಅವರ ಸಹೋದರ ರಾಹುಲ್​ ಗಾಂಧಿ ಅವರು ತಮಿಳುನಾಡಿಗೆ ಭೇಟಿ ನೀಡಿದ ಸಮಯದಲ್ಲಿ ಅಲ್ಲಿನ ಮೀನುಗಾರರನ್ನು ಭೇಟಿ ಮಾಡಿ ಮಾತನಾಡಿದ್ದರು. ಅವರೊಂದಿಗೆ ತಾವೂ ಸಮುದ್ರಕ್ಕೆ ಹಾರಿದ್ದ ವಿಡಿಯೋವೊಂದು ಸಕತ್​ ವೈರಲ್​ ಆಗಿತ್ತು. ಇದೀಗ ಅದೇ ಹಾದಿ ತುಳಿದ ಪ್ರಿಯಾಂಕಾ ಅವರ ವಿಡಿಯೋ ಕೂಡ ವೈರಲ್​ ಆಗಿದೆ.


SHARE THIS

Author:

0 التعليقات: