Friday, 5 March 2021

ಅಯೋಧ್ಯೆಗೆ ಬರುವ ಯಾತ್ರಾರ್ಥಿಗಳಿಗೆ ಅತಿಥಿ ಗೃಹ ನಿರ್ಮಾಣಕ್ಕೆ ಹೊರ ರಾಷ್ಟ್ರಗಳಿಗೆ ಅವಕಾಶ


ಅಯೋಧ್ಯೆಗೆ ಬರುವ ಯಾತ್ರಾರ್ಥಿಗಳಿಗೆ ಅತಿಥಿ ಗೃಹ ನಿರ್ಮಾಣಕ್ಕೆ ಹೊರ ರಾಷ್ಟ್ರಗಳಿಗೆ ಅವಕಾಶ

ಲಖನೌ: ರಾಮ ಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆಗೆ ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತು ಮತ್ತು ಅಂತಾರಾಷ್ಟ್ರೀಯ ಧಾರ್ಮಿಕ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅತಿಥಿ ಗೃಹ ನಿರ್ಮಾಣಕ್ಕೆ ಕೋರಿದ್ದ ಸುಮಾರು ಒಂದು ಡಜನ್ ನಷ್ಟು ಹೊರ ರಾಷ್ಟ್ರಗಳಿಗೆ ಯೋಗಿ ಆದಿತ್ಯ ನಾಥ್ ಸರ್ಕಾರ ಅವಕಾಶ ನೀಡಿದೆ.

ಭಗವನ್ ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ತಮ್ಮ ಅತಿಥಿ ಗೃಹ ನಿರ್ಮಿಸಿಕೊಳ್ಳಲು ಸುಮಾರು ಒಂದು ಡಜನ್ ನಷ್ಟು ಹೊರ ರಾಷ್ಟ್ರಗಳು ರಾಜ್ಯ ಸರ್ಕಾರವನ್ನು ಕೋರಿದ್ದವು. ಶ್ರೀಲಂಕಾ, ಕೆನಡಾ, ನೇಪಾಳ, ಫಿಜಿ, ಕೀನ್ಯಾ, ಇಂಡೋನೇಷ್ಯಾ, ಮಲೇಷ್ಯಾ, ಟ್ರಿನಿಡಿಯಾ, ಮಾರಿಷಷ್, ಥೈಲ್ಯಾಂಡ್ ಮತ್ತು ಕೊರಿಯಾ ರಾಷ್ಟ್ರಗಳು ಮನವಿ ಸಲ್ಲಿಸಿದ್ದವು.

ಕುಶಿನಗರದಲ್ಲಿ ಈ ರೀತಿಯ ಕಲ್ಪನೆ ಈಗಾಗಲೇ ಇದೆ. ಪೂರ್ವ ಏಷ್ಯಾ ವಲಯದ ಬಹುತೇಕ ರಾಷ್ಟ್ರಗಳ ಅತಿಥಿ ಗೃಹಗಳು ಕುಶಿನಗರದಲ್ಲಿವೆ. ಕುಶಿನಗರದಲ್ಲಿ ಗೌತಮ ಬುದ್ಧ ಮಹಾಪರಿನಿರ್ವಾಹಣವಾಗಿದ್ದರು.

ವಿದೇಶದಿಂದ ಬರುವ ಯಾತಾರ್ಥಿಗಳ ಅತಿಥಿ ಗೃಹ ನಿರ್ಮಾಣಕ್ಕೆ 12 ಎಕರೆಯನ್ನು ಈಗಾಗಲೇ ಗುರುತಿಸಲಾಗಿದೆ. ಯಾವುದೇ ರಾಷ್ಟ್ರ ಅರ್ಜಿ ಸಲ್ಲಿಸಬಹುದು. ಅವರಿಗೆ ಭೂಮಿ ದೊರೆಯುವಂತೆ ಮಾಡಲಾಗುವುದು ಎಂದು ಅಯೋಧ್ಯೆ ಮುನ್ಸಿಪಲ್ ಆಯುಕ್ತ ವಿಶಾಲ್ ಸಿಂಗ್ ತಿಳಿಸಿದ್ದಾರೆ.

ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಅವಾಸ್ ವಿಕಾಸ್ ನಿಗಮ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ವಸತಿ ಕಾಲೋನಿಗಳ ಜೊತೆಗೆ ಫೈವ್ ಸ್ಟಾರ್ ಹೋಟೆಲ್ ಗಳು, ಧರ್ಮಶಾಲಾಗಳು, ಆಶ್ರಮಗಳು ನೂತನ ಅಯೋಧ್ಯೆ ನಗರದಲ್ಲಿ ಇರಲಿವೆ.SHARE THIS

Author:

0 التعليقات: