Saturday, 27 March 2021

ಅಶ್ಲೀಲ ಸಿಡಿ ಬಿಡುಗಡೆ ಪ್ರಕರಣ ಹೊಲಸು ರಾಜಕಾರಣಕ್ಕೆ ನಮ್ಮ ಹೆಣ್ಮಗಳನ್ನು ಬಳಸಿಕೊಳ್ಳುತ್ತಿದ್ದಾರೆ: ಯುವತಿಯ ಪೋಷಕರ ವಾಗ್ದಾಳಿ


ಅಶ್ಲೀಲ ಸಿಡಿ ಬಿಡುಗಡೆ ಪ್ರಕರಣ 
ಹೊಲಸು ರಾಜಕಾರಣಕ್ಕೆ ನಮ್ಮ ಹೆಣ್ಮಗಳನ್ನು ಬಳಸಿಕೊಳ್ಳುತ್ತಿದ್ದಾರೆ: ಯುವತಿಯ ಪೋಷಕರ ವಾಗ್ದಾಳಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣ ಸಂಬಂಧ ಯುವತಿಯ ಪೋಷಕರು ಇಂದು ಎಸ್ಐಟಿ ಅಧಿಕಾರಿಗಳ ಎದುರು ಹಾಜರಾಗಿದ್ದು, ಅಧಿಕಾರಿಗಳು ಹೇಳಿಕೆಗಳನ್ನು ದಾಖಲಿಸಿದರು.

ಬಳಿಕ ಸುದ್ದಿಗೋಷ್ಟೀಯಲ್ಲಿ ಮಾತನಾಡಿದ ಅವರು, ನಮ್ಮ ಬಳಿ ಇದ್ದ ಸಾಕ್ಷಿಗಳನ್ನು ಅಧಿಕಾರಿಗಳಗೆ ನೀಡಿದ್ದೇವೆ ಎಂದು ಹೇಳಿದರು.

ಹೆಣ್ಣು ಮಗಳನ್ನ ಇಟ್ಟು ರಾಜಕೀಯ ಮಾಡುತ್ತಿದ್ದಾರೆ. ಹೊಲಸು ರಾಜಕಾರಣಕ್ಕೆ ನಮ್ಮ ಹೆಣ್ಮಗಳನ್ನು ಏಕೆ ಬಳಸಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದ ಅವರು, ಮಾರ್ಚ್ 2ರಂದು ಡಿಕೆಶಿ ನಿವಾಸದ ಬಳಿ ತೆರಳಿದ್ದಳು. ಅವರು ನಮ್ಮನ್ನು ಭದ್ರವಾಗಿ ಇಟ್ಟುಕೊಂಡಿದ್ದಾರೆ ಎಂದು ಆಕೆ ಹೇಳಿದ್ದಾಳೆ ಎಂದರು.

ನರೇಶ್ ಗೌಡ ಹೇಳಿಕೆಯೇ ಸುಳ್ಳು. ನಮ್ಮಕ್ಕನಿಗೆ ರಕ್ಷಣೆ ನೀಡಲು ನರೇಶ್ ಗೌಡ ಯಾರು. ನಮಗೆ ಯಾವುದೇ ರೀತಿಯ ಬೆದರಿಕೆ ಇಲ್ಲ. ಪೊಲೀಸರು ಭದ್ರತೆ ನೀಡುತ್ತಿದ್ದಾರೆ ಎಂದರು.

ನಮಗೆ ನಮ್ಮ ಅಕ್ಕನನ್ನು ಮರಳಿ ಕೊಡಿ. ನಮಗೆ ಯಾರ ವಿರುದ್ಧವೂ ಆರೋಪಗಳಿಲ್ಲ ಎಂದು ತಿಳಿಸಿದರು.



SHARE THIS

Author:

0 التعليقات: