Monday, 1 March 2021

ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆ: ಆರಂಭಿಕ ಮುನ್ನಡೆ ಪಡೆದ ಬಿಜೆಪಿ

 

ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆ: ಆರಂಭಿಕ ಮುನ್ನಡೆ ಪಡೆದ ಬಿಜೆಪಿ

ಅಹ್ಮದಾಬಾದ್: ರವಿವಾರ ನಡೆದಿರುವ ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯುತ್ತಿದ್ದು, ಆಡಳಿತಾರೂಢ ಬಿಜೆಪಿ 81 ಮುನ್ಸಿಪಾಲಿಟಿಯಲ್ಲಿ ಹೆಚ್ಚಿನ ಕಡೆ ಮುನ್ನಡೆ ಪಡೆಯುವ ಮೂಲಕ ಮುನ್ಸಿಪಲ್ ಚುನಾವಣೆಯಲ್ಲಿ ಆರಂಭಿಕ ಮುನ್ನಡೆ ಪಡೆದಿದೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ಚುನಾವಣೆ ಗಳಲ್ಲೂ ಬಿಜೆಪಿ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಗಿಂತ ಹೆಚ್ಚು ಮುನ್ನಡೆ ಪಡೆದಿದೆ.

ಬಿಜೆಪಿಯು 81 ಮುನ್ಸಿಪಾಲಿಟಿಗಳಲ್ಲಿ 54 ರಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ 2ರಲ್ಲಿ ಹಾಗೂ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಒಂದು ಸೀಟು ಗೆಲ್ಲುವುದರೊಂದಿಗೆ ತನ್ನ ಖಾತೆ ತೆರೆದಿದೆ.

31 ಜಿಲ್ಲಾ ಪಂಚಾಯತ್ ಗಳಲ್ಲಿ ಬಿಜೆಪಿಯು 12ರಲ್ಲಿ ಮುನ್ನಡೆ ಪಡೆದರೆ, ಇತರರು ಇನ್ನಷ್ಟೇ ಖಾತೆ ತೆರೆಯಬೇಕಾಗಿದೆ. 231 ತಾಲೂಕು ಪಂಚಾಯತ್ ಗಳಲ್ಲಿ ಬಿಜೆಪಿ 51ರಲ್ಲಿ ಮುನ್ನಡೆ ಪಡೆದರೆ, ಕಾಂಗ್ರೆಸ್ 7ರಲ್ಲಿ ಮುನ್ನಡೆ ಪಡೆದಿದೆ.

ಒಟ್ಟು 8,474 ಸೀಟುಗಳಿದ್ದು, 8,235 ಸೀಟುಗಳಿಗೆ ಚುನಾವಣೆ ನಡೆದಿತ್ತು. ಉಳಿದ ಸೀಟುಗಳಲ್ಲಿ ಅವಿರೋಧ ಆಯ್ಕೆ ನಡೆದಿತ್ತು.

ಕಳೆದ ವಾರ ಪ್ರಕಟವಾದ ನಗರಪಾಲಿಕೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಹ್ಮದಾಬಾದ್, ಸೂರತ್, ರಾಜ್‍ಕೋಟ್, ವಡೋದರ, ಭಾವನಗರ ಹಾಗೂ ಜಾಮ್ನಗರ ನಗರಪಾಲಿಕೆಯಲ್ಲಿ ಗೆಲುವು ಸಾಧಿಸಿತ್ತು. ಸೂರತ್ ನಲ್ಲಿ 27 ಸೀಟುಗಳನ್ನು ಜಯಿಸಿದ್ದ ಆಮ್ ಆದ್ಮಿ ಪಕ್ಷ ತನ್ನ ಇರುವಿಕೆಯನ್ನು ತೋರಿಸಿತ್ತು. ಕಾಂಗ್ರೆಸ್ ಕಳಪೆ ನಿರ್ವಹಣೆ ತೋರಿತ್ತು.


SHARE THIS

Author:

0 التعليقات: