Wednesday, 10 March 2021

'ಊಟ ಕೊಡ್ರಪ್ಪಾ ,ಹೊಡಿಬ್ಯಾಡಿ' : ಟ್ರೋಲ್ ಗೆ ಕಾರಣವಾದ 'ಜೊಮ್ಯಾಟೋ'


'ಊಟ ಕೊಡ್ರಪ್ಪಾ ,ಹೊಡಿಬ್ಯಾಡಿ' : ಟ್ರೋಲ್ ಗೆ ಕಾರಣವಾದ 'ಜೊಮ್ಯಾಟೋ' 

ಡಿಜಿಟಲ್ ಡೆಸ್ಕ್ : ಬೆಂಗಳೂರಿನಲ್ಲಿ ನಡೆದ ಜೊಮ್ಯಾಟೋ ವಿವಾದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಕಾರಣವಾಗಿದೆ.

ಡೆಲಿವರಿ ಬಾಯ್ ಹೊಡೆದ ರಭಸಕ್ಕೆ ಮಹಿಳೆಯ ಮೂಗಿನಲ್ಲಿ ರಕ್ತ ಸೋರುತ್ತಿತ್ತು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಕಾರಣವಾಗಿದ್ದು, ಕೆಲವರು ಊಟ ಕೊಡ್ರಪ್ಪಾ, ಆದರೆ ಹೊಡಿಬ್ಯಾಡಿ ಎಂದು ಜೊಮ್ಯಾಟೊಗೆ ಬುದ್ದಿವಾದ ಹೇಳಿದ್ದಾರೆ.

ಘಟನೆ ಬಗ್ಗೆ ಹಲವರು ಹಲವಾರು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದು, ಜೊಮ್ಯಾಟೊದವರು ಮೊದಲು ನಿಮ್ಮ ಡೆಲಿವರಿ ಬಾಯ್ ಗಳಿಗೆ ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಸಿ ಕೊಡಿ ಎಂದು ಹೇಳಿದ್ದಾರೆ.

ಸದ್ಯ, ಫುಡ್ ಡೆಲಿವರಿ ಸಿಬ್ಬಂದಿಯಿಂದ ನಡೆದ ಮಹಿಳೆ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ್ದ ಯುವಕನನ್ನು ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.

ಕಾಮರಾಜ್ ಎಂಬ ಜೊಮ್ಯಾಟೋ ಸಿಬ್ಬಂದಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಮೇಕಪ್ ಕಲಾವಿದೆ ಹಿತೇಶ ಚಂದ್ರನಿ ಎನ್ನುವವರು, ಫುಡ್ ಡೆಲಿವರಿ ಆರ್ಡರ್ ಗೆ ಸಂಬಂಧಿಸಿದಂತೆ ಮಾರ್ಚ್ 9ರಂದು ಝೊಮ್ಯಾಟೋ ಡೆಲಿವರಿ ಎಕ್ಸಿಕ್ಯೂಟಿವ್ ನಿಂದ ಹಲ್ಲೆ ಗೆ ಈಡಾಗಿರುವೆ ಎಂದು ಆರೋಪಿಸಿದ್ದರು.SHARE THIS

Author:

0 التعليقات: