ಅತ್ಯಾಚಾರ ಪ್ರಕರಣ: ಕ್ರಮಕೈಗೊಳ್ಳದ ಆದಿತ್ಯನಾಥ್ ತವರುಪಟ್ಟಣ ಗೋರಖ್ ಪುರದ ಇಬ್ಬರು ಪೊಲೀಸರ ಅಮಾನತು
ಲಕ್ನೊ: ಮುಖ್ಯಮಂತ್ರಿ ಆದಿತ್ಯನಾಥ್ ಅವರ ತವರುಪಟ್ಟಣ ಉತ್ತರಪ್ರದೇಶದ ಗೋರಖ್ ಪುರ ಪಟ್ಟಣದ ಅಪ್ರಾಪ್ತ ಬಾಲಕಿಗೆ ಸಂಬಂಧಿಸಿದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ಕ್ರಮಗೊಳ್ಳದ ಆರೋಪದಲ್ಲಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ, ಕೇಸ್ ದಾಖಲಿಸಲಾಗಿದೆ.
ಘಟನೆಯ ಬಳಿಕ ಸಂತ್ರಸ್ತ ಬಾಲಕಿಯನ್ನು ಮಂಗಳವಾರ ರಾತ್ರಿ ಪೊಲೀಸ್ ಪೋಸ್ಟ್ ಗೆ ಕರೆತಂದಿದ್ದರೂ ಪೊಲೀಸರು ದಿವ್ಯ ನಿರ್ಲಕ್ಷ್ಯ ತಾಳಿದ್ದರು ಎನ್ನಲಾಗಿದೆ. ಸಂತ್ರಸ್ತ ಬಾಲಕಿ ಕೃತ್ಯದ ಬಗ್ಗೆ ಮಾತನಾಡುತ್ತಿದ್ದ ವೈರಲ್ ವೀಡಿಯೊವನ್ನು ವೀಕ್ಷಿಸಿದ ಬಳಿಕ ಗೋರಖ್ ಪುರ ಪೊಲೀಸ್ ಮುಖ್ಯಸ್ಥ ಜೋಗೇಂದ್ರ ಕುಮಾರ್ ಮಧ್ಯಪ್ರವೇಶಿಸಿದ ಬಳಿಕ ಕ್ರಮ ಕೈಗೊಳ್ಳಲಾಗಿದೆ.
"ನನಗೆ ಘಟನೆ ಕುರಿತು ಮಾಹಿತಿ ಸಿಕ್ಕ ತಕ್ಷಣ ನಾನು ಹಾಗೂ ಇನ್ನೊಬ್ಬ ಅಧಿಕಾರಿ ಮಧ್ಯಪ್ರವೇಶಿಸಿದೆವು. ಈವಿಚಾರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟರ ಗಮನಕ್ಕೆ ತರಲಾಯಿತು. ಸಂತ್ರಸ್ತೆಯ ಹೇಳಿಕೆಯನ್ನು ಪಡೆಯಲಾಗಿದೆ. ಗುಂಪು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಚೌಕಿ(ಪೊಲೀಸ್ ಪೋಸ್ಟ್)ಉಸ್ತುವಾರಿ ಹಾಗೂ ಕಾನ್ಸ್ಟೇಬಲ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಇಬ್ಬರನ್ನು ಅಮಾನತುಗೊಳಿಸಲಾಗಿದ್ದು, ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಹೆಸರಿಸಿದ್ದ ಓರ್ವ ವ್ಯಕ್ತಿಯನ್ನು ನಾವು ಕಸ್ಟಡಿಗೆ ಪಡೆದಿದ್ದೇವೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ''ಎಂದು ಜೋಗಿಂದರ್ ಕುಮಾರ್ ಹೇಳಿದ್ದಾರೆ.
0 التعليقات: