Wednesday, 24 March 2021

ದುಬೈ | ಶೇಖ್ ಹಮ್ದಾನ್ ಬಿನ್ ರಶೀದ್ ಅಲ್ ಮಕ್ತೂಮ್ ನಿಧನ


ದುಬೈ | ಶೇಖ್ ಹಮ್ದಾನ್ ಬಿನ್ ರಶೀದ್ ಅಲ್ ಮಕ್ತೂಮ್ ನಿಧನ

ಯುಎಇಯ ಉಪ ಆಡಳಿತಗಾರ ಮತ್ತು ಹಣಕಾಸು ಮಂತ್ರಿಯಾಗಿ ದೀರ್ಘ ಕಾಲ ಅಧಿಕಾರದಲ್ಲಿದ್ದ ಶೇಖ್ ಹಮ್ದಾನ್ ಬಿನ್ ರಶೀದ್ ಅಲ್ ಮಕ್ತೂಮ್ ನಿಧನರಾಗಿದ್ದಾರೆ. ಈ ಕುರಿತು ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಅವರ ಸಹೋದರನಾಗಿರುವ ದುಬೈ ಆಡಳಿತಗಾರ ತನ್ನ ಟ್ವೀಟಿನಲ್ಲಿ “ನಾವು ದೇವನಿಗಾಗಿ ಇರುವವರು. ಅವನ ಬಳಿಗೆ ತೆರಳಬೇಕಾಗಿದೆ. ನನ್ನ ಪ್ರಾರ್ಥನೆ ಎಂದಿಗೂ ನಿನಗಿದೆ ನನ್ನ ಪ್ರೀತಿಯ ಸಹೋದರ” ಎಂದು ಟ್ವೀಟ್ ಮಾಡಿದ್ದಾರೆ.

ಡಿಸಂಬರ್ 9, 1971 ರಲ್ಲಿ ಮೊತ್ತ ಮೊದಲ ಕ್ಯಾಬಿನೆಟ್ ರಚನೆಯಾದ ಬಳಿಕ ಅವರು ದೇಶದ ಹಣಕಾಸು ಸಚಿವರಾಗಿ ಅಧಿಕಾರದಲ್ಲಿದ್ದರು.SHARE THIS

Author:

0 التعليقات: