Thursday, 11 March 2021

ಮಹಿಳೆಯರು ಜೀನ್ಸ್, ಪುರುಷರು ಶಾರ್ಟ್ಸ್ ಧರಿಸದಂತೆ ನಿಷೇಧ ಹೇರಿದ ಉತ್ತರಪ್ರದೇಶ ಖಾಪ್ ಪಂಚಾಯತ್

 

ಮಹಿಳೆಯರು ಜೀನ್ಸ್, ಪುರುಷರು ಶಾರ್ಟ್ಸ್ ಧರಿಸದಂತೆ ನಿಷೇಧ ಹೇರಿದ ಉತ್ತರಪ್ರದೇಶ ಖಾಪ್ ಪಂಚಾಯತ್

ಮುಝಫ್ಫರ್ ನಗರ: ಉತ್ತರಪ್ರದೇಶದ ಮುಝಫ್ಫರ್ ನಗರ ಜಿಲ್ಲೆಯ ಖಾಪ್ ಪಂಚಾಯತ್ ಒಂದು ಮಹಿಳೆಯರು ಜೀನ್ಸ್ ಪ್ಯಾಂಟ್ ಧರಿಸದಂತೆ, ಪುರುಷರು ಶಾರ್ಟ್ಸ್ ಧರಿಸದಂತೆ ನಿಷೇಧ ಹೇರಿದ ಘಟನೆ ನಡೆದಿದೆ. ಈ ಉಡುಪುಗಳೆಲ್ಲಾ ಪಾಶ್ಚಾತ್ಯ ಸಂಸ್ಕೃತಿಯ ಭಾಗವಾಗಿದ್ದು, ಎಲ್ಲ ಜನರೂ ಭಾರತೀಯ ಸಂಪ್ರದಾಯದಂತೆ ವಸ್ತ್ರಗಳನ್ನು ಧರಿಸಬೇಕು ಎಂದು ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

ಯಾರಾದರೂ ಈ ನಿಯಮಗಳನ್ನು ಉಲ್ಲಂಘಿಸಿದರೆ ಅವರನ್ನು ಬಹಿಷ್ಕರಿಸಲಾಗುವುದು ಎಂದೂ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ. ಮಾ.2ರಂದು ಚರ್ತಾವಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಿಪಲ್ಶಾ ಎಂಬ ಪ್ರದೇಶದಲ್ಲಿ ನಡೆದಿದೆ. 

ಪಂಚಾಯತ್ ನಿರ್ಧಾರವನ್ನು ಪ್ರಕಟಿಸಿದ ಸಮುದಾಯದ ಮುಖಂಡ ಮತ್ತು ಕಿಸಾನ್ ಸಂಘ ಮುಖ್ಯಸ್ಥ ಠಾಕೂರ್ ಪುರಾನ್ ಸಿಂಗ್, ಮಹಿಳೆಯರಿಗೆ ಜೀನ್ಸ್ ಮತ್ತು ಪುರುಷರು ಶಾರ್ಟ್ಸ್ ಧರಿಸುವುದನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈ ಬಟ್ಟೆಗಳು ಪಾಶ್ಚಿಮಾತ್ಯ ಸಂಸ್ಕೃತಿಯ ಭಾಗವಾಗಿದೆ ಎಂದರು. "ನಾವು ನಮ್ಮ ಸಾಂಪ್ರದಾಯಿಕ ಬಟ್ಟೆಗಳಾದ ಸೀರೆಗಳು, ಘಾಗ್ರಾ" ಮತ್ತು "ಸಲ್ವಾರ್-ಕಮೀಜ್" ಗಳನ್ನು ಧರಿಸಬೇಕು "ಎಂದು ಅವರು ಹೇಳಿದ್ದಾಗಿ ವರದಿ ತಿಳಿಸಿದೆ.


SHARE THIS

Author:

0 التعليقات: