Wednesday, 24 March 2021

ಯುವ ಸಮೂಹವು ಧಾರ್ಮಿಕತೆಯ ರಕ್ಷಕರಾಗಬೇಕು - ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ


 ಯುವ ಸಮೂಹವು ಧಾರ್ಮಿಕತೆಯ ರಕ್ಷಕರಾಗಬೇಕು - ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ 

ಕಾಸರಗೋಡು : ಸಮೂಹಕ್ಕೆ ಒಳ್ಳೆಯ ದಾರಿ ತೋರಿಸಿ ಕೊಡಲು ಯುವಕರು ಧಾರ್ಮಿಕತೆಯ ಕಾವಲುಗಾರರಾಗಿ ಮುಂದೆ ನಿಲ್ಲಬೇಕು ಎಂದು ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್  ಹೇಳಿದರು. ಅವರು ನಿನ್ನೆ ನಡೆದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ ಹದಿನೈದನೇ ಉರೂಸ್ ಮುಬಾರಕಿನ ವೇದಿಕೆಯಲ್ಲಿ ಮುಖ್ಯ ಪ್ರಭಾಷಣ ಮಾಡಿದರು.

ಉರೂಸುಗಳು ನಾಡಿನ ಐಕ್ಯತೆ ಮತ್ತು ಧಾರ್ಮಿಕ ಪ್ರಜ್ಞೆ ಬೆಳೆಸುವಲ್ಲಿ ಬಹಳ ದೊಡ್ಡ ಕೊಡುಗೆಗಳನ್ನಾಗಿವೆ ನೀಡುತ್ತಿರುವುದು. ತ್ವಾಹಿರುಲ್ ಅಹ್ದಲ್ ತಂಙಳ್ ಜನ ಮನಸ್ಸುಗಳಲ್ಲಿ ಉಂಟು ಮಾಡಿದ ಸ್ವಾಧೀನದ ದೊಡ್ಡ ಚಿಹ್ನೆಗಳಾಗಿವೆ ಮುಹಿಮ್ಮಾತಿನ ಅಭಿವೃದ್ಧಿ. ತ್ವಾಹಿರುಲ್ ಅಹ್ದಲ್ ತಂಙಳ್ ರವರು ಒಂದು ನಾಡಿನ ಮತ್ತು ಒಂದು ಸಮೂಹದ  ಆಶ್ರಯವಾಗಿ  ಮಾರ್ಪಟ್ಟರು ಎಂಬುದಕ್ಕೆ ಪುರಾವೆಯಾಗಿದೆ ಅಹ್ದಲ್ ಉರೂಸಿಗೆ ಪ್ರವಹಿಸಿದ ಜನಸಾಗರ. ಅಲ್ಲಾಹನು ಒಬ್ಬರನ್ನು ಇಷ್ಟಪಟ್ಟರೆ ಜನ ಮನಸ್ಸುಗಳಲ್ಲಿ ಅವರಿಗೆ ದೊಡ್ಡ ಪ್ರೀತಿ ಕೊಡುವನು. ತ್ಯಾಗ ಭರಿತವಾದ ತ್ವಾಹಿರುಲ್ ಅಹ್ದಲ್ ತಂಙಳ್ ರವರ ಜೀವನ ಹೊಸ ತಲೆಮಾರಿಗೆ ಉತ್ತಮ ಪಾಠವಾಗಿದೆ ಎಂದು ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಹೇಳಿದರು.

ಎಲ್ಲಾ ಜ್ಞಾನಗಳನ್ನು ಒಂದೇ ಸೂರಿನಡಿಯಲ್ಲಿ ನೀಡಲಿಕ್ಕಿರುವ   ವ್ಯವಸ್ಥೆಗಳನ್ನಾಗಿವೆ ಮೂವತ್ತನೇ ವರ್ಷಕ್ಕೆ ತಲುಪುತ್ತಿರುವ ಮುಹಿಮ್ಮಾತ್  ತಯಾರು ಮಾಡುತ್ತಿರುವುದು. ಮುಹಿಮ್ಮಾತ್ ವೈಸ್ ಪ್ರೆಸಿಡೆಂಟ್ ಹಸನುಲ್ ಅಹ್ದಲ್ ತಂಙಳ್ ಅಧ್ಯಕ್ಷತೆ ವಹಿಸಿದರು. ಕೇರಳ ಮುಸ್ಲಿಂ ಜಮಾಅತ್ ಕಾಸರಗೋಡು ಜಿಲ್ಲಾ ಪ್ರೆಸಿಡೆಂಟ್  ಮುಹಮ್ಮದ್ ಇಬ್ರಾಹೀಂ ಪೂಕುಞ್ಞಿ ತಂಙಳ್ ಕಲ್ಲಕ್ಕಟ್ಟ ಉದ್ಘಾಟಿಸಿದರು.


SHARE THIS

Author:

0 التعليقات: