Friday, 19 March 2021

ದಿಲ್ಲಿ-ಲಕ್ನೊ ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ


ದಿಲ್ಲಿ-ಲಕ್ನೊ ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ


ಗಾಝಿಯಾಬಾದ್: ಗಾಝಿಯಾಬಾದ್ ನಿಲ್ದಾಣದಲ್ಲಿ ಲಕ್ನೋದತ್ತ ಹೊರಟ ಶತಾಬ್ದಿ ಎಕ್ಸ್ ಪ್ರೆಸ್ ನ ಜನರೇಟರ್ ಕೋಚ್ ನಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಭಾರೀ ಹೊಗೆ ಆವರಿಸಿಕೊಂಡಿತು. ರೈಲಿನಲ್ಲಿದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ಶನಿವಾರ ಬೆಳಗ್ಗೆ 6:41ರ ಸುಮಾರಿಗೆ ರೈಲು ಗಾಝಿಯಾಬಾದ್ ನಿಲ್ದಾಣಕ್ಕೆ ಆಗಮಿಸಿದ್ದು, ಜನರೇಟರ್ ಕೋಚ್ ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಉಂಟಾಗಿರುವ ಹೊಗೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡ ಕೋಚ್ ನ್ನು ಬೇರ್ಪಡಿಸಿದ ನಂತರ ಬೆಳಗ್ಗೆ 8:20ರ ಸುಮಾರಿಗೆ ರೈಲು ಗಾಝಿಯಾಬಾದ್‍ನಿಂದ ಲಕ್ನೋಗೆ ಹೊರಟಿತು ಎಂದು ರೈಲ್ವೆ ತಿಳಿಸಿದೆ.

SHARE THIS

Author:

0 التعليقات: