Sunday, 28 March 2021

ಕುಟುಂಬ ಸಮ್ಮಿಲನದಿಂದ ಕುಟುಂಬದಲ್ಲಿ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಮಾಡಲು ಸಾಧ್ಯ: ರಫೀಕ್ ಮಾಸ್ಟರ್


 ಕುಟುಂಬ ಸಮ್ಮಿಲನದಿಂದ ಕುಟುಂಬದಲ್ಲಿ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಮಾಡಲು ಸಾಧ್ಯ: ರಫೀಕ್ ಮಾಸ್ಟರ್

    ಮಂಗಳೂರಿನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾನಕ್ಕೆ ಹೊಗುವ ದಾರಿಯಲ್ಲಿ, ರಸ್ತೆ ಬದಿಯಲ್ಲಿ ಇಂದು ನಮಗೆ ಕಾಣ ಸಿಗುವ ಒಂದೇ ಒಂದು ಮಸೀದಿಯಾಗಿದೆ ಮರವೂರಿನ ಜಮಾಅತ್'ಗೊಳಪಟ್ಟ. ಮುಹ್ಯಿದ್ದೀನ್ ಜುಮುಅ ಮಸ್ಜಿದ್ ಮರವೂರ್. ಮಸೀದಿ ನವೀಕರಣಕ್ಕಿಂತ ಮುಂಚೆ ಈ ಮಸೀದಿ ಮಂಗಳೂರಿನ ಪುರಾತನ ಮಂಗಳೂರಿನ ಝೀನತ್ ಬಕ್ಷ್ ಮಸೀದಿಯಂತೆ ಅಧ್ಯಾತ್ಮಿಕ ಭಾವನೆಯಿಂದ ಕೂಡಿ ಮುಖ್ಯ ದ್ವಾರ ಮತ್ತು ಇತರ ಕಿಟಕಿಗಳು ಬೆಲೆಬಾಳುವ ಬಹಳ ದೊಡ್ಡ ಗಾತ್ರದ ಮರಗಳಿಂದ ತುಂಬಿ ಮಿನುಗುತ್ತಿತ್ತು. ಹಿರಿಯರು ಹೇಳುವ ಪ್ರಾಕಾರ ಮರವೂರಿನಲ್ಲಿ ಹತ್ತು ಕುಟುಂಬವಿತ್ತು, ಐದು ವಕ್ತಿನ ಕಡ್ಡಾಯ ನಮಾಝ್'ಗೆ ಮಸೀದಿಯೊಂದರ ಅವಶ್ಯಕತೆ ಇತ್ತು ಆಗ ಈ ಮಸೀದಿ ಆ ಹತ್ತು ಕುಟುಂಬದವರಿಂದ ನಿರ್ಮಿತವಾದವು. ಮರವೂರ್ ಕುಟುಂಬದ ಮೂಲ ಇಲ್ಲಿಂದ ನೆನಪಿಸಬಹುದು. ಪ್ರತೀ ವರ್ಷ ಇಂದಿಗೂ ಅವರ ಮಕ್ಕಳು ಈದ್ ನಮಾಜ್ ಮತ್ತು ಮರವೂರಿನ ಖಬರ್'ನಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ತಂದೆ ತಾಯಿ, ಅಜ್ಜ ಅಜ್ಜಿ'ಯರಿಗೋಸ್ಕರ ಎಲ್ಲರೂ ಬಂದು ಇಲ್ಲಿ ದುಆ ಮಾಡುವುದು ರೂಢಿಯಾಗಿದೆ.

          ಮರವೂರಿನ ಅಹ್ಮದ್ ಹಾಜಿ ಮತ್ತು ಫಾತಿಮ ದಂಪತಿಗಳಿಗೆ ಒಟ್ಟು ಒಂಬತ್ತು ಮಕ್ಕಳು, ಏಳು ಗಂಡು ಮತ್ತು ಎರಡು ಹೆಣ್ಣು. ಕಾಲ ಕ್ರಮೇನ ಈ ಕುಟುಂಬದ ಬಹುತೇಕ ಸದಸ್ಯರು ಮರವೂರು ಬಿಟ್ಟು ಇತರ ಸ್ಥಳೀಯ ಊರಿನ ಕಡೆಗೆ ಸ್ಥಾಳಂತರವಾದರು. ಈಗ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಮಂಗಳೂರು, ಮೂಡಬಿದಿರೆ ಮತ್ತು ಬಜ್ಪೆಯಲ್ಲಿ ವಾಸಿಸುತ್ತಿದ್ದಾರೆ. ವಿಷೇಶವೆಂದರೆ ಈ ತಲೆಮಾರಿನ ಆ ಒಂಬತ್ತು ಮಕ್ಕಳು ಕುಟುಂಬ ಬಂಧವನ್ನು ಅನ್ಯೋನ್ಯತೆಯೊಂದಿಗೆ ಗಟ್ಟಿಯಾಗಿಟ್ಟಿದ್ದು, ಅದರ ಪರಿಣಾಮವಾಗಿ ಅವರ ಮಕ್ಕಳು ಇನ್ನಿತರ ಎಲ್ಲಾ ಮಕ್ಕಳೊಂದಿಗೆ ಸಂಪರ್ಕದಲ್ಲೇ (Cousins Relationship) ಇದ್ದು ಅವರೆಲ್ಲರೂ ಪರಸ್ಪರ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಈ ಸಹೋದರತೆಯ ಜೀವನವನ್ನು ಕುಟ್ಟುಂಬದಲ್ಲಿ ಕಲಿಯುತ್ತಿರುವ  ಯುವಕ, ಯುವತಿಯರು ಮತ್ತು ಇನ್ನು ಬರುವ ಮುಂದಿನ ಪೀಳಿಗೆಗೆ ಎಲ್ಲಾ ರೀತಿಯಲ್ಲಿ ಸಹಕಾರಿಯಾಗಲು ಮರವೂರ್  ಫಾತಿಮ ಅಹ್ಮದ್ ಟ್ರಸ್ಟ್'ಅನ್ನು  ಅಸ್ಥಿತ್ವಕ್ಕೆ ತಂದು ಸಮೀತಿ ರಚಿಸಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ತಯಾರಿಯಲ್ಲಿದೆ.ಐದು ತಲೇಮಾರನ್ನು ಒಟ್ಟು ಗೂಡಿಸಿ ಫಾಮಿಲಿ ರೀ ಯುನಿಯನ್ ಮಾಡುವ ಮೂಲಕ ಮಲವೂರಿನ ಅಹ್ಮದ್ ಹಾಜಿ ಮತ್ತು ಫಾತಿಮ ದಂಪತಿಗಳ ಮಕ್ಕಳಿಂದ, ಮೊಮ್ಮಕ್ಕಳ, ಮರಿ ಮೊಮ್ಮಕಳವರೆಗೆ ಪ್ರತಿಯಬ್ಬ ವ್ಯಕ್ತಿಯೂ ಈ ಟ್ರಸ್ಟ್'ನ ಸದಸ್ಯರಾಗಿದ್ದಾರೆ.

    ಮಂಗಳೂರು ಪರಿಸರದ ಗೆಸ್ಟ್ ಹೌಸ್ ಒಂದರಲ್ಲಿ Family Re Union ಮಾಡುವ ಮೂಲಕ ಸ್ವದೇಶದಲ್ಲಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರು ಪಾಲ್ಗೊಂಡು Maravoor Fatima Ahmed Trust'ಅನ್ನು ಅಸ್ಥಿತ್ವಕ್ಕೆ ತರಲಾಗಿದೆ.

        ಫ್ಯಾಮಿಲ್ ರಿ-ಯುನಿಯನ್'ನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ರಫೀಖ್ ಮಾಸ್ಟರ್'ರವರು ಮರವೂರ್ ಫ್ಯಾಮಿಲಿ ಟ್ರಸ್ಟ್'ನ ಮಾರ್ಗದರ್ಶಕರಾಗಿ ಮತ್ತು ಮುಖ್ಯ ಅಥಿತಿಯಾಗಿ ಭಾಗವಹಿಸಿದ ಅವರು ಮಾತನಾಡುತ್ತಾ ಕುಟುಂಬದಲ್ಲಿ ಇಂತಹ ಸಮ್ಮಿಲನ ನಡೆಸುವುದರೊಂದಿಗೆ ಯಾವ ರೀತಿಯ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಯನ್ನು ಮಾಡಬಹುದೆಂಬುವುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ'ವಸಲ್ಲಮರ ಸರಳ ಜೀವನ ಶೈಲಿ ಮತ್ತು ಹಝ್ರತ್ ಉಮರ್ ರಳಿಯಲ್ಲಾಹು ಅನ್ಹು'ರವರು ಆಡಳಿತಗಾರರಾಗಿ ಇರುವಾಗ ಅವರು ನಡೆಸಿದ ಜೀವನ ಶೈಲಿಯ ಬಗ್ಗೆ  ಹಲವಾರು ಉದಾಹರಣೆಗಳನ್ನು ನೀಡಿ ಮಾತನಾಡಿದ ಅವರು

ಧರ್ಮದ ಅನುಸಾರವಾಗಿ ನಾವು ಯಾವ ರೀತಿಯ ಸರಳತೆಯ ಜೀವನ ನಡೆಸಬೇಕೆನ್ನುವ ಬಗ್ಗೆ ಮತ್ತು ಒಬ್ಬ ಶ್ರೀಮಂತನ ಮದುವೆಗೆ ಹಾಜರಾಗಲು ನಾವೆಷ್ಟು ಆಧ್ಯತೆ ನೀಡುತ್ತೇವೆಯೋ ಅದಕ್ಕಿಂತ ಹೆಚ್ಚು ಪಟ್ಟು ಆದ್ಯತೆಯನ್ನು ನಾವು ಮರಣ ಹೊಂದಿದವರ ಮನೆಗೆ ಹೋಗಿ ಸಾಂತ್ವಾನ ನೀಡುವಲ್ಲಿಯೂ ಪ್ರೋತ್ಸಾಹಿಸ ಬೇಕು. ಕುಟುಂಬದಲ್ಲಿ ಯಾರಾದರು ಆರ್ಥಿಕ ಸಂಕಷ್ಟದಲ್ಲಿದ್ದರೆ ಕುಟುಂಬದೊಳಗಿನವರಿಂದಲೇ ಉದ್ಯೋಗ ನೀಡುವ ಮೂಲಕವೋ ಅಥವಾ ವ್ಯಾಪಾರ ನಡೆಸಲು ಮಾರ್ಗದರ್ಶನ ನೀಡುವ ಮೂಲಕವೋ ಸಹಕಾರಿಯಾಗಿ ಅದಕ್ಕೆ ಸೂಕ್ತ ಪರಿಹಾರ ಹುಡುಕಿ ಎಲ್ಲದಕ್ಕೂ ಕೊಟುಂಬದೊಳಗಿನಲ್ಲೇ ಮುಗಿಯುವ ಮಟ್ಟದಲ್ಲಿ ಕುಟುಂಬದ ಒಗ್ಗಟ್ಟನ್ನು ಬೆಳೆಸಬೇಕು. 

     ಮಕ್ಕಳಿಂದ ಖಿರಾಅತ್ ಪಾರಾಯಣ, ಯುವಕರಿಂದ ಹಗ್ಗ ಜಗ್ಗಾಟ, ವೇದಿಕೆಯ ಮುಂದೆ ನಿಂತು ಕುಟುಂಬದ ಪ್ರತಿಯೊಬ್ಬ ಸದಸ್ಯರ ಪರಿಚಯ. ಹಿಂದಿನ ಕಾಲವನ್ನು ನೆನಪಿಸುವತ್ತ ಹಿರಿಯ ಮಹಿಳೆಯರಿಂದ ಮೆಹೆಂದಿ ಹಚ್ಚುವ ಕಾರ್ಯಕ್ರಮ ಒಂದು ಕಡೆಯಾದರೆ ಮಕ್ಕಳಿಂದ ಈಜುಕೊಳದಲ್ಲಿ ಮೋಜು ಇನ್ನೊಂದು ಕಡೆ.ಯುವಕರಿಂದ ಹಲವಾರು ಆಟೋಟ ಕಾರ್ಯಕ್ರಮ ನಡೆಯಿತು.ಇಡೀ ಕುಟುಂಬದಲ್ಲಿ ಧಾರ್ಮಿಕ ಮತ್ತು ಲೌಕಿವಾದ ವಿದ್ಯೆ ಕಲಿತ ಹಾಫಿಝ್ಳ್, ಡಾಕ್ಟರ್, ಹೀಗೆ ಹಲವಾರು ಪದವಿ ಪಡೆದ ವಿದ್ಯಾವಂತ ಮತ್ತು ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸಲಾಯಿತು.   

ಅಹ್ಮದ್ ಹಾಜಿ ಮತ್ತು ಫಾತಿಮ ದಂಪತಿಗಳ ಗಂಡು ಮಕ್ಕಳೆಲ್ಲರೂ ವ್ಯಾಪಾರಸ್ಥರಾಗಿದ್ದು ಕುಟುಂಬದ ವಿಷೇಶತೆಯಾಗಿತ್ತು ಮತ್ತು ಅವರ ಇಡೀ ಜೀವಿತಾವಧಿಯಲ್ಲಿ ಸದಾ ಕಾಲ ಅವರ ಇಬ್ಬರು ಸಹೋದರಿಯರನ್ನು ಭೇಟಿಯಾಗಿ ಕ್ಷೇಮ ವಿಚಾರಿಸುತ್ತಿದ್ದುದ್ದು ಇಂದಿನ ಜನಾಂಗದಲ್ಲಿ ಕಾಣ ಸಿಗದ ಮತ್ತೊಂದು ವಿಷೇಶತೆಯಾಗಿದೆ. ಕಾರ್ಯಕ್ರಮದಲ್ಲಿ  ಇಬ್ರಾಹಿಂ ಹಾಜಿ, ಅಬೂಬಕರ್ ಹಾಜಿ ಮತ್ತು Group-4 ಅಬೂಬಕರ್'ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

     ಮರವೂರ್ ಫಾತಿಮ ಅಹ್ಮದ್ ಟ್ರಸ್ಟ್ ಹಮ್ಮಿಕೊಂಡಂತಹ ಫ್ಯಾಮಿಲಿ ರಿ-ಯುನಿಯನ್ ಕಾರ್ಯಕ್ರಮದ ಉಪಸ್ಥಿತಿಯನ್ನು ಗಣ್ಯ ಮತ್ತು ಹಿರಿಯ ವ್ಯಕ್ತಿಗಳಾದ ಹನೀಫ್ ಪ್ಲಾಸ್ಟಿಕ್, ಹಾಜಿ ಅಬೂಬಕರ್,ಹಾಜಿ ಇಬ್ರಾಹಿಂ, ಅಬೂಬಕರ್ ಗ್ರೂಪ್-೪, ಬಿ ಎ ಮುಹಮ್ಮದ್ ಬಾವ,ಅಬ್ದುಲ್ ಖಾದರ್, ಸಯ್ಯದ್, ಮುಹಮ್ಮದ್ ಬಾವ ಕಿನ್ನಿಪದವು ,ಶಬೀರ್ ಹಂಡೇಲ್, ಶಬೀರ್ ಹಾಂದಿ, ಸಲೀಮ್ ಹಾಂದಿ, ಶಾಫಿ ಬಜ್ಪೆ, ಶಕೀರ್ ಮರವೂರ್, ವಹಿಸಿದರು.

          ಕಾರ್ಯಕ್ರಮವನ್ನು ಹಾಫಿಝ್ಳ್ ಹಫ್ಹಾಮ್'ರವರು ಖಿರಾಅತ್ ಪಠಿಸುವುದರ ಮೂಲಕ ಉದ್ಘಾಟಿಸಿದರು. ಸ್ವಾಗತ ಮತ್ತು ನೀರೂಪಣೆಯನ್ನು ಅಶ್ಫಾಕ್ ಮತ್ತು ಅನ್ಸಾಫ್  ಮಾಡಿದರು.


   ವರದಿ: ಅಶ್ರು ಬಜ್ಪೆ


SHARE THIS

Author:

0 التعليقات: