ಮಹಿಳಾ ದಿನಾಚರಣೆ: ಮಹಿಳೆಯರಿಗೆ ತಾಜ್ ಮಹಲ್ ಪ್ರವೇಶ ಉಚಿತ
ಲಖನೌ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕೊಡುಗೆಯಾಗಿ ಇಂದು ಆಗ್ರಾದ ವಿಶ್ವ ಪ್ರಸಿದ್ಧ ಸ್ಮಾರಕ ತಾಜ್ ಮಹಲ್ ಹಾಗೂ ದೇಶದ ಇತರ ಎಎಸ್ ಐ ರಕ್ಷಿತ ಸ್ಮಾರಕಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶ ನೀಡುವುದಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ ಐ) ಘೋಷಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಲಖನೌ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ಪ್ರಕಾಶ್, ಮಿಷನ್ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರವೇಶದ ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ. ಚೋಟಾ ಇಮಾಂಬರ, ಬಡಾ ಇಮಾಂಬರ ಮತ್ತು ಪಿಕ್ಚರ್ ಗ್ಯಾಲರಿಗೆ ಮಹಿಳೆಯರಿಗೆ ಇಂದು ಉಚಿತ ಪ್ರವೇಶ ಘೋಷಿಸಲಾಗಿದೆ.
0 التعليقات: