Thursday, 25 March 2021

ಪ್ರಮುಖ ವಿದ್ವಾಂಸ ಶಾಹುಲ್ ಹಮೀದ್ ಬಾಖವಿ ಶಾಂತಪುರಂ ವಫಾತಾದರು


 ಪ್ರಮುಖ ವಿದ್ವಾಂಸ ಶಾಹುಲ್ ಹಮೀದ್ ಬಾಖವಿ ಶಾಂತಪುರಂ ವಫಾತಾದರು

ಕೋಝಿಕ್ಕೋಡ್:  ಇಸ್ಲಾಮಿಕ್ ಎಜ್ಯುಕೇಶನ್ ಬೋರ್ಡ್ ಆಫ್ ಇಂಡಿಯಾ, ಅಖಿಲ ಭಾರತ  ಸುನ್ನಿ ಜಂಇಯ್ಯತುಲ್ ಉಲಮ ಮುಂತಾವುಗಳ ಅಖಿಲ ಭಾರತ ಆರ್ಗನೈಝರ್ ಮತ್ತು ಪ್ರಮುಖ ವಿದ್ವಾಂಸರಾಗಿರುವ ಶಾಹುಲ್ ಹಮೀದ್ ಬಾಖವಿ ಶಾಂತಪುರಂ ವಫಾತಾದರು. ಕೋಝಿಕ್ಕೋಡ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಅವರು ಮರಣಹೊಂದಿದರು. ಮಯ್ಯಿತ್ ಅವರ ಊರಾದ ಶಾಂತಪುರಕ್ಕೆ ಕೊಂಡೊಯ್ಯಲಾಗುವುದು ಎಂದು ತಿಳಿದು ಬಂದಿದೆ.

ರಾಷ್ಟ್ರ ಮಟ್ಟದಲ್ಲಿ  ಇಸ್ಲಾಮಿಕ್ ಪ್ರಬೋಧನಾ ಕಾರ್ಯಗಳ ಸಮನ್ವಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಓರ್ವ ಪ್ರಮುಖ ವ್ಯಕ್ತಿ ಆಗಿದ್ದಾರೆ ಶಾಹುಲ್ ಹಮೀದ್ ಬಾಖವಿ ಶಾಂತಪುರಂ. ಕಳೆದ ಮೂರು ದಶಕಗಳಿಗಿಂತ ಅಧಿಕ,  ಉತ್ತರ ಭಾರತದ ಹಲವು ರಾಜ್ಯಗಳಲ್ಲಿ  ದಅವಾ ಕ್ಷೇತ್ರದಲ್ಲಿ ಅವರು ಬಹಳ ಸಕ್ರಿಯರಾಗಿದ್ದರು.  ರಾಷ್ಟ್ರಮಟ್ಟದಲ್ಲಿ ಮದರಸಾ ಚಳವಳಿಯನ್ನು ಅಭಿವೃದ್ಧಿಪಡಿಸುವಲ್ಲಿ ಅವರ ಶ್ರದ್ಧೆ ಮತ್ತು ಪ್ರಯತ್ನಗಳು ಗಮನಾರ್ಹವಾಗಿವೆ.

ಉತ್ತರ ಭಾರತದಲ್ಲಿ ಯಾವುದೇ  ಗ್ರಾಮೀಣ ಪ್ರದೇಶಗಳಲ್ಲಿ ಹೋದರೂ ಸುನ್ನಿ ಪಂಡಿತರಿಗೆ ಪರಿಚಿತವಾದ ಹೆಸರಾಗಿದೆ ಶಾಹುಲ್ ಹಮೀದ್ ಮಲೇಬಾರೀ. ಸಾಕಷ್ಟು ಪ್ರಯಾಣ ಸೌಲಭ್ಯಗಳು ಅಥವಾ ಸಂವಹನ ಸಾಧನಗಳಿಲ್ಲದ ಸಮಯದಲ್ಲಿ ಅವರ ಪ್ರಯಾಣವು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುವಂತದ್ದಾಗಿದೆ. ಅವರ ಆಳವಾದ ಪಾಂಡಿತ್ಯ, ಬಹುಭಾಷಾ ಸಾಮರ್ಥ್ಯ ಮತ್ತು ಪ್ರೀತಿಯ ಒಡನಾಟ ಅವರನ್ನು ಇತರರಿಂದ ಬೇರ್ಪಡಿಸುತ್ತವೆ. ಉತ್ತರೇಂದ್ಯಯಿಲೂಡೆ (ಉತ್ತರ ಭಾರತದ ಮೂಲಕ) ಎಂಬ ಅವರ ಕೃತಿ ಹಲವು ಪ್ರಬೋಧಕರಿಗೆ ಮಾರ್ಗದರ್ಶಿಯಾಗಿದೆ. ಅವರು ಹತ್ತು ವರ್ಷಗಳ ಕಾಲ ಆಫ್ರಿಕ ಖಂಡದಲ್ಲಿ ಕೂಡ  ದಅವಾ ಸೇವೆ ಸಲ್ಲಿಸಿದ್ದರು.

ಶಾಹುಲ್ ಹಮೀದ್ ಬಾಖವಿ ಶಾಂತಪುರಂ ಅವರ ನಿಧನಕ್ಕೆ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಸಂತಾಪ ಸೂಚಿಸಿದ್ದಾರೆ.


SHARE THIS

Author:

0 التعليقات: