ತ್ವಾಹಿರ್ ತಂಙಳ್ ಉತ್ತರ ಕೇರಳಕ್ಕೆ ಲಭಿಸಿದ ಸೌಭಾಗ್ಯ; ರಫೀಕ್ ಸಅದಿ ದೇಲಂಪಾಡಿ
ಕಾಸರಗೋಡು : ಉತ್ತರ ಕೇರಳದ ಧಾರ್ಮಿಕ ಲೌಕಿಕ ಜ್ಞಾನ ರಂಗದಲ್ಲಿ ಉನ್ನತವಾದ ಬದಲಾವಣೆಗಳನ್ನು ಉಂಟು ಮಾಡಿದ ತ್ವಾಹಿರುಲ್ ಅಹ್ದಲ್ ತಂಙಳ್, ಉತ್ತರ ಕೇರಳಕ್ಕೆ ಲಭಿಸಿದ ಸೌಭಾಗ್ಯ ಎಂದು ಮುಹಮ್ಮದ್ ರಫೀಕ್ ಸಅದಿ ದೇಲಂಪಾಡಿ ಹೇಳಿದರು. ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಹದಿನೈದನೇ ಉರೂಸ್ ಮುಬಾರಕ್ ಪ್ರಯುಕ್ತ ನಡೆದ ಮತ ಪ್ರಭಾಷಣ ವೇದಿಕೆಯ ಎರಡನೇಯ ದಿನದಲ್ಲಿ ಅವರು ಪ್ರಭಾಷಣ ಮಾಡಿದರು.
ನಿಷ್ಕಲಂಕತೆಯಿಂದ ಸಮೂಹವನ್ನು ಮುನ್ನಡೆಸಿದ ನಾಯಕರಾಗಿದ್ದರು ತ್ವಾಹಿರುಲ್ ಅಹ್ದಲ್ ತಂಙಳ್. ವಿದ್ಯಾಭ್ಯಾಸದಿಂದ ಹಿಂದುಳಿದಿದ್ದ ಒಂದು ಪ್ರದೇಶವನ್ನು ಧಾರ್ಮಿಕ ಲೌಕಿಕ ವಿದ್ಯಾಭ್ಯಾಸದ ಕೇಂದ್ರವಾಗಿ ಮಾರ್ಪಡಿಸಿದ್ದು ಒಂದು ಬೃಹತ್ ಬದಲಾವಣೆಗೆ ಕಾರಣವಾಗಿದೆ.
ಸಯ್ಯಿದ್ ಯು.ಪಿ.ಎಸ್ ತಂಙಳರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮ ಅಬ್ದುಸ್ಸಲಾಂ ದಾರಿಮಿ ಕುಬನೂರ್ ಉದ್ಘಾಟಿಸಿದರು. ಪ್ರಭಾಷಣ ಕಾರ್ಯಕ್ರಮದ ಮೂರನೇ ದಿನವಾದ ಇಂದು ರಾತ್ರಿ ಕಬೀರ್ ಹಿಮಮಿ ಸಖಾಫಿ ಗೋಳಿಯಡುಕ ಪ್ರಭಾಷಣ ಮಾಡುವರು.
0 التعليقات: