Wednesday, 10 March 2021

ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ


 ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತಾ: ಪ.ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮುಂಬರುವ ಪ.ಬಂಗಾಳ ವಿಧಾನಸಭಾ ಚುನಾವಣೆಗೆ ತಮ್ಮ ನಾಮಪತ್ರವನ್ನು ಬುಧವಾರ ಸಲ್ಲಿಸಿದರು. ಮಮತಾ ಅವರು ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 

ಡಿಎಂ ಕಚೇರಿಯಲ್ಲಿ ತನ್ನ ನಾಮಪತ್ರವನ್ನು ಸಲ್ಲಿಸಲು ನಂದಿಗ್ರಾಮದಲ್ಲಿ ನಡೆದುಕೊಂಡು ಬರುತ್ತಿದ್ದಾಗ “ಖೇಲಾ ಹೋಬ್’’ಘೋಷಣೆ ಕೂಗಿ ಸ್ವಾಗತಿಸಲಾಯಿತು.

ನಾಮಪತ್ರ ಸಲ್ಲಿಕೆಯ ಮೊದಲು ಬುಧವಾರ ಬೆಳಗ್ಗೆ ನಂದಿಗ್ರಾಮದಲ್ಲಿರುವ ಶಿವ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಅಂಫಾನ್ ಚಂಡಮಾರುತ ಬೀಸಿದಾಗಲೂ ಮಮತಾ ಅವರು ನಂದಿಗ್ರಾಮಕ್ಕೆ ಬರಲಿಲ್ಲ. ಅದರ ಬದಲಿಗೆ ತನ್ನ ಅಳಿಯ ಪ್ರತಿನಿಧಿಸುತ್ತಿರುವ ಡೈಮಂಡ್ ಹರ್ಬರ್ ಕ್ಷೇತ್ರಕ್ಕೆ ತೆರಳಿದ್ದರು. ಮಮತಾ ಐದು ವರ್ಷಗಳ ಬಳಿಕ ನಂದಿಗ್ರಾಮಕ್ಕೆ ಬಂದಿದ್ದು, ಅವರೋರ್ವ ಅವಕಾಶವಾದಿ ಎಂದು ಮಮತಾ ಎದುರಾಳಿ, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

ಮಮತಾ ಹೆದರಿದ್ದಾರೆ. ಭಯದಲ್ಲಿ ನಿನ್ನೆಯ ರ್ಯಾಲಿಯ ವೇಳೆ ತಪ್ಪು ಮಂತ್ರವನ್ನು ಪಠಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಮಮತಾ ಹೊರಗಿನವರು ಎಂದು ಕರೆಯುತ್ತಿದ್ದಾರೆ.  ಮಮತಾ ಹೊರಗಿನವರು ಎಂದು  ನಂದಿಗ್ರಾಮ ಹೇಳುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.


SHARE THIS

Author:

0 التعليقات: