Tuesday, 9 March 2021

ಯುವತಿಯ ಕಪಾಳಕ್ಕೆ ಬಾರಿಸಿದ ಮಹಿಳಾ ಪಿ.ಎಸ್.ಐ : ಘಟನೆ ಬಗ್ಗೆ ವರದಿ ನೀಡುವಂತೆ ಮಂಡ್ಯ ಎಸ್.ಪಿ ಸೂಚನೆ


 ಯುವತಿಯ ಕಪಾಳಕ್ಕೆ ಬಾರಿಸಿದ ಮಹಿಳಾ ಪಿ.ಎಸ್.ಐ : ಘಟನೆ ಬಗ್ಗೆ ವರದಿ ನೀಡುವಂತೆ ಮಂಡ್ಯ ಎಸ್.ಪಿ ಸೂಚನೆ

ಮಂಡ್ಯ : ಯುವತಿಯೊಬ್ಬರು ತನ್ನೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆಂದು ಕೋಪಗೊಂಡ ಮಹಿಳಾ ಪಿಎಸ್ ಐ ಸವಿತಾಗೌಡ ಪಾಟೀಲ್ ಯುವತಿಯ ಕಪಾಳಕ್ಕೆ ಬಾರಿಸಿದ ಘಟನೆ ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ನಡೆದಿತ್ತು.

ಪ್ರಕರಣ ಸಂಬಂಧ ಡಿವೈಎಸ್ ಪಿ ಬಳಿ ಮಂಡ್ಯ ಎಸ್ ಪಿ ವರದಿ ಕೇಳಿದ್ದಾರೆ.ಮಂಡ್ಯ ವಿಭಾಗದ ಡಿವೈಎಸ್.ಪಿ ಗೆ ಈ ಸಂಬಂಧ ವರದಿ ನೀಡುವಂತೆ ಮಂಡ್ಯ ಎಸ್ ಪಿ ಡಾ. ಅಶ್ವನಿ ಸೂಚಿಸಿದ್ದಾರೆ. ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸೌಜನ್ಯದಿಂದ ವರ್ತಿಸಬೇಕು. ಕಾನೂನು ಸುವ್ಯವಸ್ಥೆ ಸಂಚಾರಕ್ಕೆ ಸಂಬಂಧಿ ಕರ್ತವ್ಯಕ್ಕೆ ಪೊಲೀಸರ ಜೊತೆಗೆ ಸಹಕರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಯುವತಿ ಹೆಲ್ಮೆಟ್ ಧರಿಸದೇ ಪ್ರಯಣಿಸುತ್ತಿದ್ದ ಹಿನ್ನೆಲೆಯಲ್ಲಿ ಯುವತಿ ದ್ವಿಚಕ್ರ ವಾಹನವನ್ನು ಪೊಲೀಸರು ತಡೆದಿದ್ದರು. ಈ ವೇಳೆ ಪೊಲೀಸರು ಮತ್ತು ಯುವತಿಯ ನಡುವೆ ಮಾತಿಗೆ ಮಾತು ಬೆಳೆದು ಮಹಿಳಾ ಪಿಎಸ್.ಐ, ಯುವತಿಯ ಕಪಾಳಕ್ಕೆ ಬಾರಿಸಿದ್ದರು.


SHARE THIS

Author:

0 التعليقات: