Saturday, 13 March 2021

ಸಂಪತ್ತಿನಲ್ಲಿ ಭಾರಿ ಏರಿಕೆ: ಮಸ್ಕ್, ಬೆಜೊಸ್‌ರನ್ನೂ ಹಿಂದಿಕ್ಕಿದ ಅದಾನಿ


ಸಂಪತ್ತಿನಲ್ಲಿ ಭಾರಿ ಏರಿಕೆ: ಮಸ್ಕ್, ಬೆಜೊಸ್‌ರನ್ನೂ ಹಿಂದಿಕ್ಕಿದ ಅದಾನಿ

ನವದೆಹಲಿ, ಮಾರ್ಚ್ 13: ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿಯ ಸಂಪತ್ತು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ವರ್ಷ ಜಗತ್ತಿನ ಎಲ್ಲ ಶ್ರೀಮಂತ ಉದ್ಯಮಿಗಳಿಗಿಂತಲೂ ಅತ್ಯಧಿಕ, ಬಿಲಿಯನ್ ಡಾಲರ್‌ಗಟ್ಟಲೆ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ. ಅವರ ಬಂದರು, ವಿದ್ಯುತ್ ಸ್ಥಾವರ ಯೋಜನೆಗಳು ಸೇರಿದಂತೆ ಅನೇಕ ಉದ್ಯಮಗಳಿಗೆ ದೊಡ್ಡ ಮಟ್ಟದ ಹೂಡಿಕೆ ಹರಿದುಬಂದಿದೆ. ಮೊದಲ ಪೀಳಿಗೆಯ ಉದ್ಯಮಿಯಾಗಿರುವ ಅದಾನಿ ಅವರ ನಿವ್ವಳ ಸಂಪತ್ತಿನ ಮೌಲ್ಯ 2021ರಲ್ಲಿ 16.2 ಬಿಲಿಯನ್ ಡಾಲರ್‌ನಿಂದ 50 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ತಿಳಿಸಿದೆ. ಈ ಮೂಲಕ ಅವರನ್ನು ಈ ವರ್ಷ ಜಗತ್ತಿನಲ್ಲಿ ಈವರೆಗೆ ಅತಿ ಹೆಚ್ಚು ಸಂಪತ್ತು ಸಂಪಾದಿಸಿದ ವ್ಯಕ್ತಿ ಎಂದು ಪ್ರಕಟಿಸಲಾಗಿದೆ. 

ಜಗತ್ತಿನ ಮುಂಚೂಣಿ ಉದ್ಯಮಿಗಳಾದ, ಅತಿ ಶ್ರೀಮಂತ ವ್ಯಕ್ತಿ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಅವರನ್ನೂ ಗೌತಮ್ ಅದಾನಿ ಹಿಂದಿಕ್ಕಿದ್ದಾರೆ. ಅದಾನಿ ಸಮೂಹದಲ್ಲಿ ಒಂದು ಕಂಪೆನಿಯ ಹೊರತುಪಡಿಸಿ ಉಳಿದ ಎಲ್ಲ ಕಂಪೆನಿಗಳ ಷೇರುಗಳು ಕನಿಷ್ಠ ಶೇ 50ರಷ್ಟು ಹೆಚ್ಚಾಗಿದೆ. ಮುಂದೆ ಓದಿ. ಮುಕೇಶ್ ಅಂಬಾನಿ ಸಂಪತ್ತು ಕೊಂಚ ಏರಿಕೆ ಅದಾನಿಯೊಂದಿಗೆ ವಿವಿಧ ವಲಯಗಳಲ್ಲಿ ಪೈಪೋಟಿ ನೀಡುತ್ತಿರುವ ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಸಂಪತ್ತು 8.1 ಬಿಲಿಯನ್ ಡಾಲರ್‌ನಷ್ಟು ಹೆಚ್ಚಾಗಿದೆ. ಟೋಟಲ್ ಎಸ್‌ಎ ದಿಂದ ವಾರ್ಬರ್ಗ್ ಪಿಂಕಸ್‌ವರೆಗೆ ದೊಡ್ಡ ದೊಡ್ಡ ಕಂಪೆನಿಗಳಿಂದ ಹೂಡಿಕೆ ಆಕರ್ಷಿಸುವ ಮೂಲಕ ಅದಾನಿ, ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ.

ಅದಾನಿ ಜಾಲ ವಿಸ್ತರಣೆ ಬಂದರು, ವಿಮಾನ ನಿಲ್ದಾಣ, ದತ್ತಾಂಶ ಕೇಂದ್ರಗಳು, ಆಹಾರ ಉತ್ಪನ್ನಗಳು, ಕಲ್ಲಿದ್ದಲು ಗಣಿ ಹೀಗೆ ದೇಶದ ಬಹುತೇಕ ಕ್ಷೇತ್ರಗಳಿಗೆ ಅದಾನಿ ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿನ ಕಾರ್ಮೈಖಲ್ ಕಲ್ಲಿದ್ದಲು ಗಣಿ ಯೋಜನೆ ವಿವಾದದಿಂದ ಹಿನ್ನಡೆ ಅನುಭವಿಸಿದ್ದು ಬಿಟ್ಟರೆ, ಉಳಿದೆಲ್ಲ ಕಡೆ ಅದಾನಿ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. 




SHARE THIS

Author:

0 التعليقات: