Thursday, 4 March 2021

'ಬೈಸೆಪ್ಸ್'ಗಾಗಿ ಪೆಟ್ರೋಲಿಯಂ ಜೆಲ್ಲಿ ಇಂಜೆಕ್ಟ್ ಮಾಡಿಕೊಂಡ ಯುವಕ!


 'ಬೈಸೆಪ್ಸ್'ಗಾಗಿ ಪೆಟ್ರೋಲಿಯಂ ಜೆಲ್ಲಿ ಇಂಜೆಕ್ಟ್ ಮಾಡಿಕೊಂಡ ಯುವಕ!

ನೀವು 90ರ ದಶಕದಲ್ಲಿ ಕಾರ್ಟೂನ್​ ನೆಟ್​ವರ್ಕ್ ನೋಡಿ ಬೆಳೆದ ಮಕ್ಕಳಾಗಿದ್ರೆ ನಿಮಗೆ ಪಾಪ್​ ಐ ಎಂಬ ಕಾಮಿಕ್​ ಪಾತ್ರದ ಬಗ್ಗೆ ಚೆನ್ನಾಗೇ ಗೊತ್ತಿರುತ್ತೆ. ಪಾಪ್​ ಐ ಬೈಸೆಪ್ಸ್​ಗಳಂತೂ ಮಕ್ಕಳಿಗೆ ತುಂಬಾನೇ ಇಷ್ಟವಾಗುತ್ತಿತ್ತು.

ಕಿರಿಲ್​ ಟೆರೆಶಿನ್​ ಎಂಬ ಹೆಸರಿನ ವ್ಯಕ್ತಿ ಕೂಡ ಚಿಕ್ಕ ವಯಸ್ಸಲ್ಲಿ ಇಂತದ್ದೇ ಕಾರ್ಟೂನ್​ಗಳನ್ನ ನೋಡಿ ಬಾಲ್ಯವನ್ನ ಕಳೆದಿದ್ದರಿಂದ ತಾನೂ ಬೈಸೆಪ್ಸ್ ಹೊಂದಬೇಕು ಎಂದು ಮಹದಾಸೆ ಹೊಂದಿದ್ದ ಎನ್ನಲಾಗಿದೆ.

ಇದಕ್ಕಾಗಿ ಆತನ ಜಿಮ್​ಗೆ ಹೋಗಲಿಲ್ಲ ಅಥವಾ ವ್ಯಾಯಾಮವನ್ನೂ ಮಾಡಲಿಲ್ಲ. ಬದಲಾಗಿ ತನ್ನ ತೋಳುಗಳಲ್ಲಿ ಬರೋಬ್ಬರಿ ಮೂರು ಲೀಟರ್​ ಪೆಟ್ರೋಲಿಯಂ ಜೆಲ್ಲಿಯನ್ನು ಇಂಜೆಕ್ಟ್ ಮಾಡಿಕೊಂಡಿದ್ದ. ಈತನ ದೊಡ್ಡ ತೋಳನ್ನ ನೋಡಿದ ಬಳಿಕ ಎಲ್ಲರೂ ಈತನಿಗೆ ಸ್ಥಳೀಯ ಸೆಲೆಬ್ರಿಟಿ ಸ್ಥಾನ ನೀಡಿದ್ರು.

ಆದರೆ ಕಿರಿಲ್​ರ ಈ ಪ್ಲಾನ್​ ಬಹಳ ವರ್ಷ ನಡೆಯಲಿಲ್ಲ. ತೋಳಲ್ಲಿದ್ದ ಪೆಟ್ರೋಲಿಯಂ ಜೆಲ್ಲಿಯಿಂದ ಕೈನ ಆರೋಗ್ಯ ಹದಗೆಡುತ್ತಾ ಬಂದಿದೆ. ಇದರಿಂದಾಗಿ ಕಿರಿಲ್​ ಅನಿವಾರ್ಯವಾಗಿ ಸರ್ಜರಿಗೆ ಒಳಗಾಗಬೇಕಾಗಿ ಬಂತು. ಪೆಟ್ರೋಲಿಯಂ ಜೆಲ್ಲಿ ಗಟ್ಟಿಯಾದ ಬಳಿಕ ಉಂಡೆಯಾಗಿ ಮಾರ್ಪಾಡಾಗಿದ್ದು ಇದನ್ನ ತೆಗೆಯೋಕೆ ಸಾಕಷ್ಟು ಸರ್ಜರಿ ಮಾಡಬೇಕಾಗಿ ಬಂದಿದೆ.

ಕೊರೊನಾ ಕಾರಣದಿಂದಾಗಿ ಈ ಸರ್ಜರಿ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿತ್ತು. ಇದೀಗ ವೈದ್ಯರು ಸರ್ಜರಿ ಯಶಸ್ವಿಗೊಳಿಸಿದ್ದು ಪೆಟ್ರೋಲಿಯಂ ಜೆಲ್ಲಿಯನ್ನ ತೆಗೆದು ಹಾಕಿದ್ದಾರೆ. 24 ವರ್ಷದ ಕಿರಿಲ್​ ಈಗ ಆರೋಗ್ಯವಾಗಿದ್ದಾರೆ. 20 ವರ್ಷ ವಯಸ್ಸಿನವನಾಗಿದ್ದಾಗ ಕಿರಿಲ್​ ತಮ್ಮ ಕೈಗೆ ತಾವೇ ಪೆಟ್ರೋಲಿಯಂ ಜೆಲ್ಲಿ ಇಂಜೆಕ್ಟ್ ಮಾಡಿಕೊಂಡಿದ್ರು.


SHARE THIS

Author:

0 التعليقات: