Saturday, 6 March 2021

ಗೋಮಾಂಸ ರಫ್ತು ಮಾಡುತ್ತಿರುವವರು ಹಿಂದೂ ಮಾರ್ವಾಡಿಗಳು | ತೃಣಮೂಲ ಶಾಸಕ


ಗೋಮಾಂಸ ರಫ್ತು ಮಾಡುತ್ತಿರುವವರು ಹಿಂದೂ ಮಾರ್ವಾಡಿಗಳು | ತೃಣಮೂಲ ಶಾಸಕ

ತೃಣಮೂಲ ಕಾಂಗ್ರೆಸ್ ಶಾಸಕ ಸಿದ್ದೀಕುಲ್ಲಾ ಚೌದರಿ ಗೋಮಾಂಸ ರಫ್ತು ಮಾಡುತ್ತಿರುವವರು ಮುಸ್ಲಿಮರಲ್ಲ ಹಿಂದೂ ಮಾರ್ವಾಡಿಗಳು ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅಧಿತ್ಯನಾಥ್ ಬಂಗಾಳ ಭೇಟಿಯ ಸಂದರ್ಭ ಪಶ್ವಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧಿಸುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು “ಕಳೆದ 1000-1200 ವರ್ಷಗಳಿಂದ ಬಂಗಾಳಿಗರು ಹಿಂದೂ ಮುಸ್ಲಿಂ ಭೇದಭಾವವಿಲ್ಲದೆ ಗೋಮಾಂಸ ಸೇವಿಸುತ್ತಿದ್ದಾರೆ. ಗೋ ಹತ್ಯೆ ನಿಷೇಧವು ಹಿಂದುತ್ವವನ್ನು ಬಲಪಡಿಸುವ ಪ್ರಯತ್ನವಾಗಿದೆ. ವಿದೇಶಿ ಫೈವ್ ಸ್ಟಾರ್ ರೆಸ್ಟೋರೆಂಟ್ ನಲ್ಲಿ ಪ್ರವಾಸಿಗರು ಭಾರತೀಯ ಗೋಮಾಂಸ ಸೇವನೆ ಸಾಮಾನ್ಯವಾಗಿದೆ. ಇದನ್ನು ರಫ್ತು ಮಾಡುವವರು ಮುಸ್ಲಿಮರಲ್ಲ ಬದಲಾಗಿ ಹಿಂದೂ ಮಾರ್ವಾಡಿಗಳು” ಎಂದು ಅವರು ಹೇಳಿದ್ದಾರೆ.SHARE THIS

Author:

0 التعليقات: