Saturday, 6 March 2021

ಜಾರಕಿಹೊಳಿ ಸಿ.ಡಿಯಲ್ಲಿದ್ದ ಯುವತಿಯನ್ನು ಪತ್ತೆ ಹಚ್ಚಿದ ಬೆಂಗಳೂರು ಪೊಲೀಸರು


ಜಾರಕಿಹೊಳಿ ಸಿ.ಡಿಯಲ್ಲಿದ್ದ ಯುವತಿಯನ್ನು ಪತ್ತೆ ಹಚ್ಚಿದ ಬೆಂಗಳೂರು ಪೊಲೀಸರು

ಬೆಂಗಳೂರು: ರಮೇಶ್‌ ಜಾರಕಿಹೊಳಿ ರಾಜೀನಾಮೆಗೆ ಕಾರಣವಾದ ಅಶ್ಲೀಲ ವಿಡಿಯೋದಲ್ಲಿದ್ದ ಯುವತಿಯ ವಿಳಾಸ, ಗುರುತು ಪತ್ತೆ ಹಚ್ಚುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದು, ಯಾವುದೇ ಕ್ಷಣದಲ್ಲಿ ಆಕೆಯ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.

ಆರ್‌ಟಿ ನಗರ ಪ್ರದೇಶದಲ್ಲಿನ ಬಹುಮಹಡಿ ಕಟ್ಟಡದಲ್ಲಿ ಮಾ.1ರವರೆಗೂ ವಾಸವಿದ್ದ ಯುವತಿ, ಅದೇ ದಿನದಿಂದ ಕಾಣೆಯಾಗಿದ್ದಾಳೆ. ಮರುದಿನ ಮಾ.2ರಂದು ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ವಿಡಿಯೋ ಬಿಡುಗಡೆ ಮಾಡಿ ಠಾಣೆಗೆ ದೂರು ನೀಡಿದ್ದರು. ಸಂತ್ರಸ್ತೆ ಆರ್‌.ಟಿ ನಗರದಲ್ಲಿ ವಾಸವಿದ್ದಳು ಎಂಬ ಮಾಹಿತಿ ಆಧರಿಸಿ ಹಲವು ಪೇಯಿಂಗ್‌ ಗೆಸ್ಟ್‌ ಕಟ್ಟಡಗಳಿಗೆ ಭೇಟಿ ಕೊಟ್ಟು ಫೋಟೊ ತೋರಿಸಿ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಕಟ್ಟಡವೊಂದರಲ್ಲಿ ಯುವತಿ ವಾಸವಿರುವುದು ಖಚಿತವಾಗಿದೆ.

ಯುವತಿ ವಾಸವಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿ ಕಟ್ಟಡ ಮಾಲೀಕರು, ಮೇಲ್ವಿಚಾರಕರ ವಿಚಾರಣೆ ನಡೆಸಿದ ಪೊಲೀಸರು ವಾಪಸ್‌ ಮರಳಿದ್ದಾರೆ. ಬಾಡಿಗೆಗೆ ಬರುವ ವೇಳೆ ನೀಡಿದ್ದ ಪೋನ್‌ ನಂಬರ್‌ ಮತ್ತು ಇನ್ನಿತರ ವಿವರಗಳನ್ನು ಪಡೆದುಕೊಂಡು ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ. ಯುವತಿ ನಗರದ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ವ್ಯಾಸಂಗಕ್ಕೆ ಪ್ರವೇಶ ಪಡೆದಿದ್ದಳು. ಆದರೆ, ವ್ಯಾಸಂಗ ಪೂರ್ಣಗೊಂಡಿರಲಿಲ್ಲ. ರಾಜಾಜಿನಗರದಲ್ಲಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಹೇಳಲಾಗಿದೆ.

ಯುವತಿ ಆರ್‌ಟಿ ನಗರದ ಮನೆಯಲ್ಲಿ 2018ರಿಂದ ವಾಸವಿದ್ದಳು. ಈಕೆ ವಾಸವಿದ್ದ ಮನೆಗೆ ಸ್ನೇಹಿತೆಯರು ಕೂಡ ಆಗಾಗ ಬಂದು ಹೋಗುತ್ತಿದ್ದರು ಎಂದು ಕಟ್ಟಡ ಮಾಲೀಕರು ಪೊಲೀಸರು ಮಾಹಿತಿ ನೀಡಿದ್ದಾರೆ. ಕಟ್ಟಡದ ಮಾಲೀಕರು ಸರಕಾರದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಗೊತ್ತಾಗಿದೆ. ಯುವತಿ ಪತ್ತೆಯಾದ ಬಳಿಕ ಅತ್ಯಾಚಾರ, ವಂಚನೆ, ಹನಿಟ್ರ್ಯಾಪ್‌, ಒಪ್ಪಿತ ಲೈಂಗಿಕ ಕ್ರಿಯೆ ಮುಂತಾದ ವಿಚಾರಗಳ ಕುರಿತು ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಕಲೆಹಾಕುವ ಸಾಧ್ಯತೆ ಇದೆ.SHARE THIS

Author:

0 التعليقات: