Monday, 8 March 2021

ಶಾಲೆಯ ಗೋಡೆ ಕುಸಿದು ಆರು ಕಾರ್ಮಿಕರು ಸಾವು, ಮೂವರಿಗೆ ಗಾಯ


ಶಾಲೆಯ ಗೋಡೆ ಕುಸಿದು ಆರು ಕಾರ್ಮಿಕರು ಸಾವು, ಮೂವರಿಗೆ ಗಾಯ

ಖಾಗರಿಯಾ : ಬಿಹಾರದ ಶಾಲೆಯೊಂದರ ಗೋಡೆ ಕುಸಿದ ಪರಿಣಾಮ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಮಹೇಶ್‌ಖುಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಚೈಧಾ ಬನ್ನಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಸರ್ಕಾರಿ ಯೋಜನೆಯಡಿ ಶಾಲೆಯ ಸುತ್ತಲಿನ ಗೋಡೆಯ ಪಕ್ಕದಲ್ಲಿ ಚರಂಡಿ ನಿರ್ಮಿಸಲು ಕಾರ್ಮಿಕರು ನೆಲ ಅಗೆಯುತ್ತಿದ್ದಾಗ ಗೋಡೆ ಅವರ ಮೇಲೆ ಕುಸಿದು ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.

ಈ ಹಿನ್ನೆಲೆ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಷಾದ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಘೋಷಣೆ ಮಾಡಿದ್ದಾರೆ.


 


SHARE THIS

Author:

0 التعليقات: