Tuesday, 23 March 2021

ಸಂಸ್ಥೆಯ ಶಿಲ್ಪಿಯ ತ್ಯಾಗ ಸ್ಮರಿಸುತ್ತಾ ಮುಹಿಮ್ಮಾತ್ ಸಾಂಘಿಕ ಸಮ್ಮೇಳನ

 

ಸಂಸ್ಥೆಯ ಶಿಲ್ಪಿಯ ತ್ಯಾಗ ಸ್ಮರಿಸುತ್ತಾ ಮುಹಿಮ್ಮಾತ್ ಸಾಂಘಿಕ ಸಮ್ಮೇಳನ 

ಕಾಸರಗೋಡು : ಮುಹಿಮ್ಮಾತ್ ಸಂಸ್ಥೆಗಳ ಶಿಲ್ಪಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ ತ್ಯಾಗಗಳನ್ನು ಮತ್ತು ಮುನ್ನಡೆಗಳನ್ನು ಚರ್ಚಿಸುತ್ತಾ ನಡೆದ ಸಾಂಘಿಕ ಸಮ್ಮೇಳನ ಬಹಳ ಸಂಭ್ರಮದಿಂದ ನಡೆಯಿತು. ಕಾಸರಗೋಡು ಜಿಲ್ಲೆಯ ಸಾಂಘಿಕ ಚಟುವಟಿಕೆಗಳಿಗೆ ನೇತೃತ್ವ ಕೊಟ್ಟ ಓರ್ವ ಮಹಾ ಪುರುಷರಾಗಿದ್ದರಾರೆ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್.   

ಜಿಲ್ಲೆಯ ಸಾಂಘಿಕ ರಂಗ ಸಜೀವವಾಗಿಸಲು ಕಾರ್ಯಕರ್ತರು ಮುಂದೆ ಬರಬೇಕೆಂದು ನಾಯಕರು ನೆನಪಿಸಿದರು. 

ಎಸ್‌ವೈಎಸ್ ರಾಜ್ಯ ಸಾಂತ್ವನ ಕಾರ್ಯದರ್ಶಿ ಪಿ.ಬಿ.ಬಶೀರ್ ಪುಲಿಕೂರ್ ಅಧ್ಯಕ್ಷತೆ ಯಲ್ಲಿ  ಎಸ್‌.ವೈ.ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಜಲಾಲುದ್ದೀನ್ ಅಲ್ ಬುಖಾರಿ ಸಮಾರಂಭವನ್ನು ಉದ್ಘಾಟಿಸಿದರು. ರಹಮತುಲ್ಲಾ ಸಖಾಫಿ ಎಲಮರಂ ಅವರು ವಿಷಯ ಮಂಡಿಸಿದರು.  ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಸದಸ್ಯ ಬಿ.ಎಸ್.ಅಬ್ದುಲ್ಲಕುಂಞಿ ಫೈಝಿ, ಸಮಸ್ತ ಜಿಲ್ಲಾ ಕಾರ್ಯದರ್ಶಿ ಮೊಯಿದು ಸ‌ಅದಿ ಚೆರೂರು ಮತ್ತು ಮೂಸಲ್ ಮದನಿ ತಲಕ್ಕಿ, ಸಿ ಎನ್ ಅಬ್ದುಲ್ ಖಾದರ್ ಮಾಸ್ಟರ್, ಎಂ ಪಿ ಅಬ್ದುಲ್ಲಾ ಫೈಝಿ ನೆಕ್ರಾಜೆ, ತಾಜುದ್ದೀನ್ ಮಾಸ್ಟರ್, ಸಿದ್ದೀಖ್ ಸಖಾಫಿ ಆವಲ, ಅಬ್ದುಲ್ ಸಲಾಂ ಸಖಾಫಿ ಪಾಲಡ್ಕ, ಅಬ್ದುಲ್ ರಹ್ಮಾನ್ ಸಖಾಫಿ ಪೂತಪ್ಪಲಂ, ಮುಹಮ್ಮದ್ ಕುಂಞಿ ಪುಂಡೂರ್  ಮುಂತಾದವರು ಸಭೆಯಲ್ಲಿ ಭಾಗವಹಿಸಿದರು.

ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಸ್ವಾಗತ ಮತ್ತು ಮೂಸ ಸಖಾಫಿ ಕಳತ್ತೂರ್ ಕೃತಜ್ಞತೆ ಸಲ್ಲಿಸಿದರು.



SHARE THIS

Author:

0 التعليقات: