ಕಾಸರಗೋಡು :ಮುಹಿಮ್ಮಾತ್ ಸಂಸ್ಥೆಗಳ ಸ್ಥಾಪಕ ಮತ್ತು ಪ್ರಮುಖ ಆಧ್ಯಾತ್ಮಿಕ ಪಂಡಿತರಾಗಿದ್ದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಹದಿನೈದನೇ ಉರೂಸ್ ಮುಬಾರಕಿನ ಸಮಾರೋಪ ಸಮಾರಂಭ ನಾಳೆ ಪುತ್ತಿಗೆ ಮುಹಿಮ್ಮಾತ್ ನಗರದಲ್ಲಿ ನಡೆಯಲಿದೆ.
23 ರಂದು ಸಂಜೆ 7 ಗಂಟೆಗೆ ನಡೆಯಲಿರುವ ಸಮಾರೋಪ ಮಹಾ ಸಮ್ಮೇಳನಕ್ಕೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಜನರಲ್ ಸೆಕ್ರೆಟರಿ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ನೇತೃತ್ವ ವಹಿಸುವರು. ಸಯ್ಯಿದ್ ಅಲೀ ಬಾಫಕಿ ತಂಙಳ್ ರವರ ಪ್ರಾರ್ಥನೆಯೊಂದಿಗೆ ಆರಂಭವಾಗುವ ಅಹ್ದಲಿಯ್ಯಾ ಆಧ್ಯಾತ್ಮಿಕ ಸಮ್ಮೇಳನದಲ್ಲಿ ತಾಜುಶ್ಶರೀಅ ಎಂ. ಅಲಿ ಕುಞ್ಞಿ ಉಸ್ತಾದ್ ಅಧ್ಯಕ್ಷತೆ ವಹಿಸುವರು. ಕುಂಬೋಲ್ ಕೆ.ಎಸ್ ಆಟಕೋಯ ತಂಙಳ್ ಉದ್ಘಾಟಿಸುವರು. ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕೆ.ಪಿ ಅಬೂಬಕರ್ ಮುಸ್ಲಿಯಾರ್ ಪಟ್ಟುವಂ, ಮುಹಮ್ಮದ್ ಅಲಿ ಸಖಾಫಿ ತೃಕರಿಪ್ಪೂರ್, ಮಾಣಿಕೊತ್ ಎ.ಪಿ ಅಬ್ದುಲ್ಲಾ ಮುಸ್ಲಿಯಾರ್, ಸಯ್ಯಿದ್ ತ್ವಾಹ ತಂಙಳ್, ಹುಸೈನ್ ಸಅದಿ ಕೆ.ಸಿ ರೋಡ್, ಎಡಪ್ಪಾಳಂ ಮುಹಮ್ಮದ್ ಮುಸ್ಲಿಯಾರ್, ಉಸ್ಮಾನ್ ಸಅದಿ ಪಟ್ಟೋರಿ, ನಿಝಾಮುದ್ದೀನ್ ಫಾಳಿಲಿ ಕೊಲ್ಲಂ, ಲತೀಫ್ ಸಅದಿ ಶಿವಮೊಗ್ಗ ಮುಂತಾದವರು ಭಾಗವಹಿಸಲಿದ್ದಾರೆ. ಸಯ್ಯಿದ್ ಮುಹಮ್ಮದ್ ಇಬ್ರಾಹೀಂ ಪೂಕುಞ್ಞಿ ತಂಙಳ್ ಕಲ್ಲಕ್ಕಟ್ಟ ಸಮಾರೋಪ ಪ್ರಾರ್ಥನೆಗೆ ನೇತೃತ್ವ ವಹಿಸುವರು. ಕೊನೆಗೆ ಅನ್ನದಾನದೊಂದಿಗೆ ಉರೂಸ್ ಕಾರ್ಯಕ್ರಮಕ್ಕೆ ಮುಕ್ತಾಯವಾಗಲಿದೆ.
ಬೆಳಿಗ್ಗೆ 10 ಗಂಟೆಗೆ ಸಾಂಘಿಕ ಸಂಗಮವನ್ನು ಎಸ್ವೈಎಸ್ ಜಿಲ್ಲಾಧ್ಯಕ್ಷ ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಮೌಲಿದ್ ಮಜ್ಲಿಸ್ಗೆ ಸಯ್ಯಿದ್ ಝೈನುಲ್ ಅಬಿದೀನ್ ಮುತ್ತುಕೋಯ ತಂಙಳ್ ಕಣ್ಣವಂ ನೇತೃತ್ವ ನೀಡಲಿದ್ದಾರೆ. ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ ಉದ್ಭೋದನೆ ನೀಡಲಿದ್ದಾರೆ.
ಸಂಜೆ 4 ಗಂಟೆಗೆ ಮಹ್ಳರತುಲ್ ಬದ್ರಿಯ್ಯಾ ನಡೆಯಲಿದೆ. ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ನೇತೃತ್ವ ನೀಡಲಿದ್ದಾರೆ. ಹಂಝ ಮಿಸ್ಬಾಹಿ ಓಟಪದವು ಉದ್ಬೋದನೆ ನಿರ್ವಹಿಸಲಿದ್ದಾರೆ.
0 التعليقات: