Wednesday, 10 March 2021

ಕೆ.ಸಿ.ಎಫ್ ಸೌದಿ ಅರೇಬಿಯಾದ ಸತತ ಪ್ರಯತ್ನದಿಂದಾಗಿ 7 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ಉಳ್ಳಾಲದ ಯುವಕ


 ಕೆ.ಸಿ.ಎಫ್ ಸೌದಿ ಅರೇಬಿಯಾದ ಸತತ ಪ್ರಯತ್ನದಿಂದಾಗಿ 7 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ಉಳ್ಳಾಲದ ಯುವಕ

ಕಳೆದ ಏಳು ವರ್ಷಗಳಿಂದ ಸೌದಿ ಅರೇಬಿಯಾದ ತ್ವಾಹಿಫ್ ನಲ್ಲಿ ಜೈಲು ವಾಸದಲ್ಲಿದ್ದ ಉಳ್ಳಾಲ ಮುಕ್ಕಚ್ಚೇರಿಯ ಯುವಕ ನಿಯಾಝ್ ಎಂಬವರು ಮಾರ್ಚ್ 06 ರಂದು ಬಿಡುಗಡೆಯಾಗಿ ತಮ್ಮ ಮನೆಗೆ ತಲುಪಿದ್ದಾರೆ.

ನಿಯಾಝ್ ಎಂಬ ಯುವಕ ಜೈಲಿನಲ್ಲಿರುವ ವಿವರವನ್ನು SSF ಮುಕ್ಕಚ್ಚೇರಿ ಶಾಖೆಯ ಕಾರ್ಯಕರ್ತರು ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆಯ ನೇತಾರರಾದ ಮುಹಮ್ಮದ್ ಮಲೆಬೆಟ್ಟು ರವರಿಗೆ ತಿಳಿಸಿದ್ದರು. ಅಲ್ಲಿಂದ ಅವರು ಬಿಡುಗಡೆಯಾಗಿ ಊರಿಗೆ ತಲುಪುವವರೆಗೆ 

ಇದಕ್ಕೆ ಬೇಕಾದ ಎಲ್ಲಾ ರೀತಿಯ ಕಾನೂನು ಪ್ರಕ್ರಿಯೆಗಳಿಗೆ ಮುಹಮ್ಮದ್ ಮಲೆಬೆಟ್ಟು ರವರು ನೇತ್ರತ್ವ ನೀಡಿದರು.

ದಾಖಲೆಗಳು ಮಾತ್ರವಲ್ಲದೇ ಅವರ ಬಿಡುಗಡೆಗೆ ಸರಿಸುಮಾರು ಮೂವತ್ತು ಲಕ್ಷ ರೂಪಾಯಿಯಷ್ಟು ಖರ್ಚಾಗಿದ್ದು, ಇದಕ್ಕೆ ಊರಿನಲ್ಲಿ ಹಾಗೂ ಗಲ್ಫ್ ನಲ್ಲಿರುವ ಹಲವಾರು ದಾನಿಗಳು ಸಹಾಯ ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಉಳ್ಳಾಲದ ಉದ್ಯಮಿ ಅಲ್ತಾಫ್ ಸಾಕೋ ರವರು ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇವರಿಗೆ ಬೆನ್ನೆಲುಬಾಗಿ ನಝೀರ್ ಎಕೆ, ಸೌದಿಯ ಉದ್ಯಮಿಗಳಾದ ಶಾಕಿರ್ Compass, ಅಸ್ಲಮ್ Blue Mart, ಬಶೀರ್ ಸಾಗರ್ Saqco, ವಸೀಮ್ Saqco, NGC ಇಸ್ಮಾಯಿಲ್, ಅಶ್ರಫ್ Saqco, ಶಕೀಲ್ Makavi,  ಸಲಾಂ Raqwan, ಇಸ್ಮಾಯಿಲ್ Real Tech, ಹಫೀಝ್ Sasco, ಅಬೂಬಕ್ಕರ್ ಹಾಜಿ ರೈಸ್ಕೋ, ಸಿದ್ದೀಕ್ KMT, ಅಬೂಬಕ್ಕರ್ Face, ಅಶ್ರಫ್ ATL, ಶಮೀಮ್ Llumac, ಝಕರಿಯ್ಯ Muzzain, ಕಲಂದರ್ Spectrum ಹಾಗೂ ಸೌದಿ ಅರೇಬಿಯಾದ ಇನ್ನಿತರ ಹಲವು ಉದ್ಯಮಿಗಳು ಸಹಕಾರ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ಊರಿನಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಯು ಟಿ ಖಾದರ್ ರವರ ತಮ್ಮ ಯು ಟಿ ಇಫ್ತಿಕಾರ್, ಶೌಕತ್ Blue Line, ರವೂಫ್ ಪುತ್ತಿಗೆ, ಹಾರಿಸ್ Marine, ಮನ್ಸೂರ್ ಆಝಾದ್, UF ಇಕ್ಬಾಲ್ ಸೇರಿದಂತೆ ಹಲವು ಉದ್ಯಮಿಗಳು ಉತ್ತಮವಾದ ರೀತಿಯಲ್ಲಿ ಸಹಾಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಹಲವು ಜನರ ಸಹಾಯ ಸಹಕಾರದಿಂದಾಗಿ ಜೈಲಿನಲ್ಲಿ ಇದ್ದ ನಿಯಾಝ್ ಇಂದು ತಮ್ಮ ಮನೆ ಸೇರುವಂತಾಗಿದೆ.

ರಜೆಯ ನಿಮಿತ್ತ ಊರಿನಲ್ಲಿರುವ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರು ಡಿಪಿ ಯೂಸುಫ್ ಸಖಾಫಿ ಬೈತಾರ್, ಅಂತರ್ರಾಷ್ಟ್ರೀಯ ಸಮಿತಿ ನೇತಾರರಾದ ನಝೀರ್ ಹಾಜಿ ಕಾಶಿಪಟ್ನ, ಎನ್ ಎಸ್ ಅಬ್ದುಲ್ಲಾ, ಫಾರೂಕ್ ಕಾಟಿಪಳ್ಳ,ಮೊಹಮ್ಮದ್  ಝುಹರಿ   ಹಾಗೂ ಇನ್ನಿತರ ನೇತಾರರು ನಿಯಾಝ್ ರವರ ಮನೆಗೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.SHARE THIS

Author:

0 التعليقات: